ಸಂಜೀವರಾಯನಕೋಟೆಯಲ್ಲಿ ಚಿರತೆಗಳ ದಾಳಿ 21 ಕುರಿ ಸಾವು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.10 : ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಹೊಲದಲ್ಲಿನ  ಕುರಿಹಟ್ಟಿ ಮೇಲೆ ಚಿರತೆಗಳು ಇಂದು ಬೆಳಗಿನ ಜಾವ ದಾಳಿ ಮಾಡಿ, 21 ಕುರಿಗಳನ್ನು ಕೊಂದು ಹಾಕಿ, ಒಂದು ಕುರಿಯನ್ನು ಹೊತ್ತು ಕೊಂಡು ಹೋದ ಘಟನೆ ನಡೆದಿದೆ.
ಸಣ್ಣ ತಿಮ್ಮಪ್ಪ ಮಗ ಮಂಜು  ಎಂಬುವವರಿಗೆ ಸೇರಿದ ಕುರಿಹಿಂಡನ್ನು ಹೊಲದಲ್ಲಿ ಹಟ್ಟಿ ಹಾಕಿ ಕೂಡಿಹಾಕಲಾಗಿತ್ತು. 
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ   ಸೂಕ್ತ ಪರಿಹಾರ ನೀಡಲು ಕೋರಿದೆ.
ಈ ಭಾಗದಲ್ಲಿ ಬೆಳಗಿನ ಜಾವ ಹಾಗೂ ಸಂಜೆಹೊತ್ತು ವಾಕಿಂಗ್ ಬರುವರರು ಬಹಳ ಅರಣ್ಯ ಸಿಬ್ಬಂದಿ ಸೂಚಿಸಿದೆ.