ಸಂಜೀವರಾಯನಕೋಟೆಯಲ್ಲಿ
ಸರ್ದಾರ ವಲ್ಲಭಾಯಿ ಪಟೇಲ್ ಜಯಂತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.31: ದೇಶದ 565 ರಾಜ ಪ್ರಭುತ್ವಗಳ ರಾಜರುಗಳನ್ನು ಮನವೊಲಿಸಿ ಒಕ್ಕೂಟ ಭಾರತವನ್ನು ರಚನೆ ಮಾಡಿದವರು ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾದಿನ ಹಾಗೂ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಟೇಲ್ ಅವರ ಬದ್ಧತೆ ಹಾಗೂ ರಾಜಿಮಾಡಿಕೊಳ್ಳದ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ವಿದ್ಯಾರ್ಥಿಗಳಾದ ಕೆ.ಸುಮ,ಮಹೇಶ ಟಿ,ಮೇಘನ,ಶ್ರೀವಚನ
ಎಸ್. ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ,ಗ್ರಾಮ ಪಂಚಾಯಿತಿ ಸದಸ್ಯರಾದ ಬಸಮ್ಮ, ಕೆರಾಳಪ್ಪ,ಶಿಕ್ಷಕರಾದ ಮುನಾವರ ಸುಲ್ತಾನ, ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್,ಚನ್ನಮ್ಮ, ಸುಮತಿ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ರಾಮಾಂಜಿನೇಯ, ಗುರುಪ್ರಸಾದ್,ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ, ನಿಂಗಮ್ಮ ಮುಂತಾದವರು ಉಪಸ್ಥಿತರಿದ್ದರು.