ಸಂಜಯ ಪಾಟೀಲ್ ಹೇಳಿಕೆ ಖಂಡನೀಯ:ಶಿರಬೂರ

ಕೊಲ್ಹಾರ: ಏ.15:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ಅವಹೇಳನಕಾರಿ ಹೇಳಿಕೆ ಖಂಡನೀಯ ಎಂದು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮುಸ್ಕಾನ್ ಶಿರಬೂರ ಹೇಳಿದರು.
ಸಂಜಯ ಪಾಟೀಲ್ ಅವರು ಸಂಸ್ಕøತಿ ಎಂತಹದ್ದು ಅನ್ನುವುದು ಅವರ ಹೇಳಿಕೆಯಿಂದಲೇ ಬಿಂಬಿತವಾಗುತ್ತದೆ, ಮಹಿಳಾ ಕುಲಕ್ಕೆ ಅವಮಾನ ಮಾಡಿರುವ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.