ಸಂಜನಾ ಜತೆ ನಿರ್ಮಾಪಕ ಮಂಜು

ಬೆಂಗಳೂರು, ಸೆ.೧೪- ಮಾದಕ ವಸ್ತು ಜಾಲ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾಣಿ ಮತ್ತು ರಾಹುಲ್ ಅವರೊಂದಿಗೆ ನಿರ್ಮಾಪಕ ಕೆ ಮಂಜು ಜೊತೆ ಇರುವ ಫೋಟೋ ಬಿಡುಗಡೆಯಾಗಿದ್ದು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಮಾಧ್ಯಮಗಳಲ್ಲಿ ಫೋಟೋ ಬಿಡುಗಡೆಯಾಗುತ್ತಿದ್ದಂತೆ ನಿರ್ಮಾಪಕ ಕೆ ಮಂಜು ಪ್ರತಿಕ್ರಿಯಿಸಿ, ಪ್ರಶಾಂತ್ ಸಂಬರಗಿ ಟೊಳ್ಳು ಪೊಳ್ಳು ಹೇಳಿಕೆ ನೀಡಿ ಪೋಟೋ ಬಿಡುಗಡೆ ಮಾಡಿದರೆ ಪ್ರೂವ್ ಆಗಲ್ಲ..ಕಾನೂನು,ನ್ಯಾಯಲಯ ನ್ಯಾಯಾದೀಶರು ಇರುತ್ತಾರೆ.ನಾನೇನು ತಪ್ಪು ಮಾಡಿಲ್ಲ ಎಂದಿದ್ದಾರೆ.
ಸಂಬರಗಿ ಬುಡ ಬಡಕೆ ನಾಟಕ ಜಾಸ್ತಿ ದಿನ ನಡೆಯಲ್ಲಸತ್ತಕ್ಕೆ ಜಯ ಸಿಗಲಿದೆ. ಅಮಾಯಕರಿಗೆ ತೊಂದರೆ ಕೊಡುವುದೇ ಅವರ ಉದ್ದೇಶ ಎಂದರು.
ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ನಾನು ಯಾವುದೇ ತಪ್ಪು ಮಾಡಿಲ್ಲ .ಯಾವುದೇ ಪಾಪದ ಹಣದಿಂದಲೀ ಸಿನಿಮಾ ಮಾಡಿಲ್ಲ. ಕಷ್ಟಪಟ್ಟು ದುಡಿದು ಸಿನಿಮಾ ನಿರ್ಮಾಣ ಮಾಡಿದ್ದೇನೆ ಎಂದರು.
ಹಿರಿಯ ಕಲಾವಿದರಾದ ಅಂಬರೀಶ್ ವಿಷ್ಣುವರ್ಧನ್ ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡದೊಡ್ಡ ಲೆಜೆಂಡ್ ಕಲಾವಿದರ ಜೊತೆ ಪಾರ್ಟಿ ಮಾಡಿದ್ದೇನೆ ಪಾರ್ಟಿಗೆ ಹೋದರೆ ಅಥವಾ ಫೋಟೋ ತೆಗೆಸಿಕೊಂಡರು ತಪ್ಪು ಮಾಡಿದ್ದೇನೆ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ
ಸಂಬರಗಿ ಕ್ರಿಮಿನಲ್: ಮಾದಕವಸ್ತು ಜಾಲ ಪ್ರಕರಣದಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಬಯಲಿಗೆಳೆದು ಅದನ್ನು ಸ್ವಚ್ಛ ಮಾಡುತ್ತೇನೆ ಎಂದು ಹೇಳುವ ಪ್ರಶಾಂತ್ ಸಂಬರಗಿ ಇದುವರೆಗೂ ಎಲ್ಲಿದ್ದರು ಎಂದು ಪ್ರಶ್ನಿಸಿರುವ ನಿರ್ಮಾಪಕ ಕೆ. ಮಂಜು, ಅವರೊಬ್ಬ ಬುದ್ಧಿವಂತ ಕ್ರಿಮಿನಲ್ ಎಂದು ಹರಿಹಾಯ್ದಿದ್ದಾರೆ.
ಕ್ರಿಮಿನಲ್ ಇರಬೇಕು ಹಾಗಿದ್ದಾಗ ಮಾತ್ರ ಹೀಗೆಲ್ಲಾ ಮಾತನಾಡಲು ಸಾದ್ಯ.ಅಮಾಯಕರನ್ನು ಬಲಿ ಕೊಡುವ ಕೆಲಸ ಸಂಬರಗಿ ಮಾಡುತ್ತಿದ್ದಾರೆ.ಬೇರೆ ಯಾವ ಕಡೆ ಬೆಲೆ ಕೊಡಲ್ಲ.ಹೀಗಾಗಿ ಚಿತ್ರರಂಗದ ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮೀಟೂ ಪ್ರಕರಣ ಬೆಳಕಿಗೆ ಬಂದ ಈತ ಪ್ರತ್ಯಕ್ಷ ನಾಗಿದ್ದಾನೆ ಎಂದು ತಿಳಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ.ತಪ್ಪು ಮಾಡಿದ್ದರೆ ನನಗೂ ಶಿಕ್ಷೆ ಆಗಲಿದೆ .ದೇಶದಲ್ಲಿ ಕಾನೂನು ಅಂತಿಮ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ನೀಡಲಿದೆ ಎಂದು ಹೇಳಿದರು
ಪ್ರಶಾಂತ್ ಸಂಬರಗಿ ಯಾರ ಜೊತೆ ಇದ್ದರೂ ಎನ್ನುವುದು ನನಗೂ ಗೊತ್ತಿದೆ ಎಂದು ಹೇಳಿದ ಅವರು ಸಮಾಜ ಸೇವೆ ಮಾಡುವ ನೀವು ಮಾದಕವಸ್ತು ಸೇವನೆ ವಿಷಯ ಗೊತ್ತಿದ್ದರೂ ಯಾಕೆ ಸುಮ್ಮನೆ ಇದ್ದೀರಿ ಎಂದು ಪ್ರಶ್ನಿಸಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕರ ಜೊತೆ ನಟಿಯರು ಹೋದರೆ ತಪ್ಪೇನು ಎಂದ ಅವರು ನಟಿ ರಾಗಿಣಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದಾರೆ.ಚಿತ್ರರಂಗದಲ್ಲಿ ಇರುವವರಿಗೆ ಜಾತಿ ಗೊತ್ತಿಲ್ಲ.ಕೆಲವರಿಂದ ಮಾನ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.