ಸಂಜನಾಗೆ ಚಿನ್ನದ ಪದಕ

ದಾವಣಗೆರೆ.ಮೇ.೨೮: ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಎಸ್. ಸಂಜನಾ ಅವರು ಉತ್ತಮ ಪ್ರದರ್ಶನ ನೀಡಿ ಬಂಗಾರದ ಪದಕ ಪಡೆದಿದ್ದಾರೆ.ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವ ಸಬಲೀಕರಣ ಸಹಯೋಗದಲ್ಲಿ ಜಮ್ಮುವಿನ ತಾವೇಯಲ್ಲಿ ಕಳೆದ ವಾರ ನಡೆದ ಆರನೇ ಯೋಗಾ ಸ್ಪರ್ಧೆಯಲ್ಲಿ ೧೮ರಿಂದ ೨೩ ವರ್ಷ ವಯಸ್ಸಿನ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಜನಾ ಪ್ರಥಮ ಬಹುಮಾನ ಪಡೆದಿದ್ದಾರೆ.ಯೋಗ ಗುರುಗಳಾದ ಪರಶುರಾಮ್ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಂಜನಾ ಅವರು ಜೆಡಿಎಸ್ ಮುಖಂಡರಾದ ಬಾತಿ ಶಂಕರ್ ಮತ್ತು ಶೋಭಾ ಅವರ ಪುತ್ರಿಯಾಗಿದ್ದಾರೆ.