ಸಂಚಾರ ಪೊಲೀಸ್ ಸಿಬ್ಬಂದಿಗೆ ಮೂಲ ಜೀವನ ಬೆಂಬಲ ತರಬೇತಿ

ಕಲಬುರಗಿ,ಆ.6-ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಅರ್ಥೋಪೆಡಿಕ್ ಸಂಘದ ಸಹಯೋಗದೊಂದಿಗೆ ಬೋನ್ ಆ್ಯಂಡ್ ಜಾಯಿಂಟ್ ವೀಕ್ ಅಂಗವಾಗಿ ಜಿಲ್ಲೆಯ ಸಂಚಾರ ಪೊಲೀಸ್ ಸಿಬ್ಬಂದಿಗೆ (25-30 ಅಧಿಕಾರಿಗಳು) ಮೂಲ ಜೀವನ ಬೆಂಬಲ ತರಬೇತಿಯನ್ನು ಆಯೋಜಿಸಿತ್ತು.
ಟ್ರಾಫಿಕ್ ಪೊಲೀಸರು, ಪೊಲೀಸ್ ಸಿಬ್ಬಂದಿ, ಚಾಲಕರು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಪ್ರತಿಸ್ಪಂದಕರಿಗೆ ತರಬೇತಿಯನ್ನು ನಡೆಸಲಾಗುತಿದ್ದು, ಪ್ರಥಮ ಚಿಕಿತ್ಸೆ ಮತ್ತು ಮೂಲಭೂತ ಜೀವ ವಿಜ್ಞಾನದ ಮೇಲೆ ದೈಹಿಕ ತರಬೇತಿಯು ರಸ್ತೆ ಸುರಕ್ಷತೆಯ ಅರಿವು ಮತ್ತು ಮೂಳೆ ಆರೋಗ್ಯದ ಅರಿವನ್ನು ಒಳಗೊಂಡಿತ್ತು. ಅಪಘಾತಕ್ಕಿಡಾದವರ ಗೋಲ್ಡನ್ ಟೈಮ್ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಲಾಯಿತು. ಈ ವರ್ಷದ ಬೋನ್ ಮತ್ತು ಜಾಯಿಂಟ್ ವಾರದ ಥೀಮ್ ಈಚ್ ಒನ್ ಟ್ರೇನ್ ಒನ್ ಸೇವ್ ಒನ್ ಆಗಿತ್ತು.
ಬಿಎಂಡಿ ಪರೀಕ್ಷೆಯನ್ನು ಜಿಮ್ಸ್ ಬೋಧನಾ ಆಸ್ಪತ್ರೆಯ ಅರ್ಥೋಪೆಡಿಕ್ಸ್ ವಿಭಾಗದಲ್ಲಿ ಉಚಿತವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಮ್ಸ್, ಕಲಬುರಗಿಯ ಡೀನ್ ಮತ್ತು ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರು ಬಿಎಂಡಿ ಪರೀಕ್ಷೆಯಿಂದ ಆಗುವ ಪ್ರಯೋಜನಗಳ ಕುರಿತು ಒತ್ತಿ ಹೇಳಿದರು.
ಡಾ.ಎಂ.ಡಿ. ಇಬ್ರಾಹಿಂ, ಅಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು ಮತ್ತು ಗುಲಬರ್ಗಾ ಅರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕಿಶೋರ ಮೆಂಗಿ, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.