ಸಂಚಾರ ನಿಯಮ ಪಾಲನೆಗೆ ಸೂಚನೆ

ಮಾಲೂರು.ಸೆ೨೧: ಅಪಘಾತ ರಹಿತ ವಾಹನ ಸಂಚಾರಕ್ಕಾಗಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೋಲಿಸ್ ಆರಕ್ಷಕ ನಿರೀಕ್ಷಕ ಮಾಕೊಂಡಯ್ಯ ಹೇಳಿದರು.
ಪಟ್ಟಣದ ಮುಖ್ಯರಸ್ತೆಯ ಮಾರಿಕಾಂಬ ದ್ವಾರದ ಬಳಿ ವಾಹನಗಳ ಸಂಚಾರ ನಿಯಂತ್ರಣ ನಿರ್ವಹಿಸುವ ಮೂಲಕ ಮಾತನಾಡಿದರು.
ಮಾಲೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ ಅದರಂತೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಮುಖ್ಯ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿದ್ದವು ಅಪಘಾತಗಳನ್ನು ತಡೆಯಲು ಖಾಸಗಿ ಕಂಪನಿಯವರ ಸಹಕಾರದಿಂದ ಪಟ್ಟಣದ ಮುಖ್ಯರಸ್ತೆಯ ಮಾರಿಕಾಂಬದ್ವಾರದ ವೃತ್ತದಲ್ಲಿ ಸಂಚಾರಿ ದೀಪಗಳನ್ನು ಅಳವಡಿಸಲಾಗಿದೆ, ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ಸಂಚರಿಸುವ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತ ರಹಿತ ಚಾಲನೆ ಮಾಡಬೇಕು ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ಗಳನ್ನು ಧರಿಸಿ ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಬೇಕು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಿ ತಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿ ಕೊಳ್ಳುವಂತೆ ತಿಳಿಸಿದರು.