ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮ

ನರೇಗಲ್, ಮಾ1: ಪೆÇಲೀಸ್ ಇಲಾಖೆಯ ಮೂರನೇ ಕಣ್ಣು (ಥರ್ಡ್ ಐ) ಮಾರ್ಚ್ 1 ರಿಂದ ನರೇಗಲ್ ಪಟ್ಟಣದಲ್ಲೂ ಕಾರ್ಯಾರಂಭ ಮಾಡಲಿದೆ ಆದ್ದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂದೆ ದುರ್ಗಾ ವೃತ್ತದಲ್ಲಿ ಪೆÇಲೀಸ್ ಇಲಾಖೆಯಿಂದ ಕ್ಯಾಮೆರಾ ಅಳವಡಿಸಿರುವ ಅಂಗವಾಗಿ ನಡೆದ ಸಂಚಾರ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಟ್ರಿಪಲ್ ರೈಡಿಂಗ್ ಮಾಡಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಕಾರಿನವರು ಸೀಟ್ ಬೆಲ್ಟ್ ಹಾಕಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು’ ಎಂದರು.

`ಒಂದು ವೇಳೆ ಸವಾರರು ಸಂಚಾರ ನಿಯಮಗಳನ್ನು ಪಾಲನೆ ಮಾಡದೇ ವಾಹನ ಚಾಲನೆ ಮಾಡುವ ದೃಶ್ಯ ಈ ಥರ್ಡ್ ಐ ಕ್ಯಾಮೆರಾದಲ್ಲಿ ಸೆರೆಯಾದರೆ ದಂಡ ಸಹಿತ ನೋಟಿಸ್ ನೇರವಾಗಿ ವಾಹನದ ಮಾಲೀಕರ ಮನೆ ವಿಳಾಸಕ್ಕೆ ಬರುತ್ತದೆ. ಬೇರೆಯವರಿಗೆ ವಾಹನ ಕೊಟ್ಟಾಗಲೂ ಮಾಲೀಕರ ಮನೆಗೆ ನೋಟಿಸ್ ಬರುತ್ತದೆ. ಹೀಗಾಗಿ ಬೇರೆಯವರಿಗೆ ವಾಹನ ಕೊಡುವ ಮೊದಲು ವಿಚಾರ ಮಾಡಬೇಕು. ಅದರಲ್ಲಿಯೂ ಅಪ್ರಾಪ್ತರ ಕೈಯಲ್ಲಿ ವಾಹನ ಕೊಟ್ಟರೆ ಭಾರಿ ಪ್ರಮಾಣದ ದಂಡ ಕಟ್ಟಬೇಕಾಗಿ ಬರುತ್ತದೆ. ಆದ್ದರಿಂದ ಸಂಚಾರ ನಿಯಮಗಳ ಪಾಲನೆಗೆ ಮುಂದಾಗಿ ಎಂದರು.

`ನಾಗರಿಕ ಸಮಾಜದಲ್ಲಿ ಅಪಘಾತಗಳಿಂದಾಗಿಯೇ ಹೆಚ್ಚು ಜೀವ ಹಾನಿಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆ. ಇದು ತಪ್ಪಬೇಕಾದರೆ ವಾಹನ ಚಾಲಕರು, ವಿಶೇಷವಾಗಿ ಯುವಕರು ಸಂಚಾರ ನಿಯಮಗಳನ್ನು ಪಾಲಿಸಿದಾಗ ಮಾತ್ರ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು’ ಎಂದರು.

ನರೇಗಲ್ ಪೆÇಲೀಸ್ ಠಾಣಾಧಿಕಾರಿ ಶಿವಾನಂದ ಬನ್ನಿಕೊಪ್ಪ ಮಾತನಾಡಿ, `ಗದಗ ಜಿಲ್ಲೆಯ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಥರ್ಡ್ ಐ ಅಳವಡಿಸಬೇಕು ಎಂಬ ಸರ್ಕಾರದ ಆದೇಶದಂತೆ ಇಲ್ಲಿಯೂ ಅಳವಡಿಸಲಾಗಿದೆ. ಪಟ್ಟಣದಲ್ಲಿ ಇನ್ನೂ ನಾಲ್ಕು ಕಡೆಗಳಲ್ಲಿ ಕ್ಯಾಮೆರಾಗಳನ್ನು ಕ್ರಮೇಣ ಅಳವಡಿಸಲಾಗುತ್ತದೆ’ ಎಂದರು.

`ಸಂಚಾರ ನಿಯಮ ಪಾಲನೆ ಮಾಡದ ವ್ಯಕ್ತಿ ನಿಗದಿತ ದಂಡವನ್ನು ಅವಧಿಯೊಳಗೆ ಕಟ್ಟದಿದ್ದರೆ, ವಾಹನವನ್ನು ಜಪ್ತಿ ಮಾಡಲಾಗುವುದು. ವಾಹನ ಚಾಲನೆ ಪರವಾನಗಿಯನ್ನೂ ರದ್ದು ಮಾಡಬಹುದು. ಆದ್ದರಿಂದ ಜಾಗೃತರಾಗಬೇಕು’ ಎಂದರು.

ನರೇಗಲ್ ಠಾಣೆಯ ಎಎಸ್‍ಐ ಕೆ.ಆರ್. ಬೇಲೇರಿ, ಎಸ್.ಆರ್. ನದಾಫ್, ಕೆ.ವಿ. ಹಿರೇಮಠ, ಎಂ.ವೈ. ಉಪ್ಪಾರ, ವಿಜಯ ಗೋದಿಗನೂರ, ಆರ್.ಎಸ್. ಕಪ್ಪತ್ತನವರ, ಮುತ್ತು ಹಡಪದ ಇದ್ದರು.