ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಮೂವರು ಕಳ್ಳರು

ಬೆಂಗಳೂರು,ಏ.17- ಕಳವು ಮಾಡಿದ ದ್ವಿಚಕ್ರ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವೇಳೆ ಕಾರ್ಯಾಚರಣೆ ನಡೆಸಿದ ಬ್ಯಾಡರಹಳ್ಳಿ‌ ಪೊಲೀಸರಿಗೆ ಮೂವರು ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಗೌಸ್ ಮದ್ದೀನ್, ರೋಷನ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳು ಮೊದಲು ಅಂಧ್ರಹಳ್ಳಿಯ ರಸ್ತೆ ಬದಿ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನ ಕಳ್ಳತನ‌ ಮಾಡಿದ್ದರು.
ವಾಹನ‌ದ ಮಾಲೀಕ‌ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರಿನ‌ ಮೇರೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಮಧ್ಯೆ ಆರೋಪಿಗಳು ಕದ್ದ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ವಿಚಾರಣೆ ನಡೆಸಿದಾಗ ಕಳ್ಳರು ಕದ್ದ ವಾಹನದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಇನ್ನು, ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಅರೋಪಿಗಳು ನೀಡಿದ ಮಾಹಿತಿ ಮೇರೆಗೆ ನಗರದಲ್ಲಿ ವಿವಿಧ ಕಡೆ ಕಳ್ಳತನ‌ ಮಾಡಿರುವ ಪಕ್ರರಣ ಬಯಲಿಗೆ ಬಂದಿವೆ. ಸದ್ಯ ಪೊಲೀಸರು ಆರೋಪಿಗಳಿಂದ 1.50ಲಕ್ಷ ಬೆಲೆ ಬಾಳುವ 4 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.