ಸಂಚಾರ ನಿಯಮ ಉಲ್ಲಂಘನೆ ಬೈಕ್ ಸವಾರನಿಗೆ 42,500 ದಂಡ

ಬೆಂಗಳೂರು,ಅ.30-ಬರೋಬರಿ 77 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೈಕ್ ಮಾಲೀಕನಿಗೆ 42,500 ರೂ.ಗಳ ದಂಡವನ್ನು ಮಡಿವಾಳ ಸಂಚಾರ ಪೋಲೀಸರು ವಿಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಬೈಕ್ ಸವಾರ ಅರುಣ್ ಕುಮಾರ್ ಇಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮತ್ತು ಪಿಎಸ್‍ಐ ಶಿವರಾಜ್ ಕುಮಾರ್ ಅವರು ದಂಡ ಪರಿಶೀಲನೆ ನಡೆಸಿ ಅರುಣ್ ಕುಮಾರ್ ಗೆ 42,500 ರೂ. ದಂಡ ವಿಧಿಸಿ ನೋಟಿಸ್ ನೀಡಿ ಬೈಕ್ ವಶಕ್ಕೆ ಪಡೆದಿದ್ದಾರೆ.
ಕೊರೊನಾ ಲಾಕ್‍ಡೌನ್ ಬಳಿಕ ಸಂ ನಿಯಮಗಳನ್ನು ಮರೆತು ಸಂಚಾರ ಮಾಡುತ್ತಿದ್ದ ಸವಾರರಿಗೆ ಸದ್ಯ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಅಲ್ಲದೇ ಕಟ್ಟು ನಿಟ್ಟಿನ ಕ್ರಮಕೈಗೊಂಡು ನಿಯಮಗಳನ್ನು ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಆಡುಗೊಡಿಯಲ್ಲಿ ಬುಲೆಟ್ ಬೈಕ್ ಮಾಲೀಕನೊಬ್ಬ ಬರೋಬ್ಬರಿ 58 ಸಾವಿರದ 200 ರೂಪಾಯಿ ದಂಡವನ್ನು ಪಾವತಿ ಮಾಡಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡುತ್ತಿದ್ದ ರಾಜೇಶ್ ಬುಲೆಟ್ ಬೈಕ್ ಮೇಲೆ ಬರೋಬ್ಬರಿ 103 ಕೇಸ್ ಇರುವುದನ್ನು ಕಂಡು ಪೊಲೀಸರು, ಸಂಚಾರ ನಿಮಯ ಉಲ್ಲಂಘನೆ ಕೇಸ್‍ಗಳು ಸೆಂಚುರಿ ದಾಟಿದ ಪರಿಣಾಮ 58 ಸಾವಿರದ 200 ರೂಪಾಯಿಯನ್ನು ದಂಡ ಹಾಕಿದ್ದರು.