ಸಂಚಾರ ನಿಯಂತ್ರಿಸಿ ಪ್ರಾಣ ಉಳಿಸಿ ಪ್ರತಿಭಟನೆ

ಸಿಂಧನೂರು,ಆ.೧೨-
ನಗರದ ರಸ್ತೆಯ ಎರಡು ಕಡೆ ವಾಹನಗಳು ಅಡ್ಡ ದಿಡ್ಡಿಯಾಗಿ ನಿಲ್ಲುವುದರಿಂದ ರಸ್ತೆಯ ಅಪಘಾತಗಳು ಸಂಭವಿಸುತ್ತಿದ್ದು ಕೂಡಲೆ ರಸ್ತೆಗೆ ಹಂಪ್ಸ್ ಹಾಕುವಂತೆ ಅಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ವೇದಿಕೆಯ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ವಿದ್ಯಾರ್ಥಿ ವೇದಿಕೆಯ ನೇತೃತ್ವದಲ್ಲಿ ನಗರದ ಬಸವ ವೃತ್ತದಿಂದ ತಹಶೀಲ್ದಾರ ಕಛೇರಿಯ ತನಕ ಪ್ರತಿಭಟನೆ ಮೆರವಣೆಗೆ ನಡಿಸಿ ಸಂಚಾರ ನಿಯಂತ್ರಿಸಿ ಜನರ ಪ್ರಾಣ ಉಳಿಸಿ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದರು.
ನಗರದ ಬಸ್ ನಿಲ್ದಾಣದ ಮುಂಭಾಗ ರಸ್ತೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ರಸ್ತೆ ಇದೆ. ಸಾರ್ವಜನಿಕರು ಈ ರಸ್ತೆಯಲ್ಲಿ ಪ್ರತಿ ದಿನ ಸಂಚಾರ ಮಾಡುತ್ತಾರೆ ಅಲ್ಲದೆ ಅತಿ ಹೆಚ್ಚಿನ ಸಂಖ್ಯೆಯ ಇರುವ ರಸ್ತೆಯಾಗಿದೆ ರಸ್ತೆಯ ಎರಡು ಕಡೆಗಳಲ್ಲಿ ಹಾಗೂ ಹೊಟೇಲ್ ಅಂಗಡಿಗಳು, ಬಾರ್‌ಗಳ ಮುಂಭಾಗದಲ್ಲಿ ಅಡ್ಡಾ ದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ರಸ್ತೆ ದಾಟಿ ಆಸ್ಪತ್ರೆ ಹಾಗೂ ಇನ್ನಿತರ ಕೆಲಸ ಗಳಿಗೆ ಹೋಗಬೇಕಾದರೆ ಎಲ್ಲಿ ಅಪಘಾತವಾಗಿ ಬೀಡುತ್ತೇದೆ ಎಂಬ ಭಯದಿಂದ ಜೀವ ಕೈಯಲ್ಲಿ ಇಡಿದು ಕೊಂಡು ರಸ್ತೆಯನ್ನು ದಾಟಬೇಕಾಗಿದೆ.
ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಹಲವಾರು ಹಣ್ಣು ವ್ಯಾಪಾರಿಗಳು ರಸ್ತೆಯ ಮೇಲೆ ಕುಳಿತು ವ್ಯಾಪಾರ ಮಾಡುತ್ತಿದ್ದು ಒಳಗಿಂದ ಹೊರಗೆ ಹೊರಗಿನಿಂದ ಒಳಗೆ ಹೋಗುವ ಬಸ್‌ಗಳಿಗೆ ರಸ್ತೆಗೆ ಅಡ್ಡಲಾಗಿ ವ್ಯಾಪಾರಿಗಳು ಡಬ್ಬಿಗಳನ್ನು ಇಟ್ಟುಕೊಂಡಿದ್ದಾರೆ, ಒಂದು ಎಳೆ ನೀರು ಮಾರುವ ಅಂಗಡಿ ಇದೆ ಇದರಿಂದ ಬಸ್ ಗಳು ಡಿಪೋ ಒಳಗೆ ಹೋಗಲು ರಸ್ತೆ ಇಕ್ಕಾಟ್ಟಾಗಿದೆ.
ಇದರ ಬಗ್ಗೆ ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡ ಮನಿ ಗಮನಕ್ಕೆ ಇದೆ ಆದರು ಇವುಗಳನ್ನು ತೆಗೆಯಿಸದೆ ಇರುವದು ನೋಡಿದರೆ ವ್ಯಾಪಾರಿಗಳ ಜೊತೆ ವ್ಯವಹಾರ ಕುದಿರಿಸಿದ್ದಾರೆ ಎಂಬ ಅನುಮಾನ ಬರುತ್ತದೆ ರಸ್ತೆಗೆ ಅಡ್ಡಲಾಗಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಿ ಇದರಿಂದ ಅಪಘಾತಗಳು ಸಂಭವಿಸುತ್ತೇವೆ ಎಂದು ನಾನು ಹಲವಾರು ಸಲ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡರು ಯಾವುದೆ ಪ್ರಯೋಜನವಾಗಿಲ್ಲ ಎಂದು ಹೋಟೆಲ್ ಮಾಲಿಕ್ ಶಂಕರ ಶೆಟ್ಟಿ ತಮ್ಮ ಅಸಮಾಧಾನವನ್ನು ಪತ್ರಿಕೆಯ ಮುಂದೆ ತೋಡಿಕೊಂಡರು.
ಅಧಿಕಾರಿಗಳು ಜನ ಪ್ರತಿ ನಿದಿಗಳಿಗೆ ಇದರ ಬಗ್ಗೆ ಗೊತ್ತಿದ್ದರು ಸಹ ಯಾವದೆ ಕ್ರಮ ಕೈಗೊಂಡಿಲ್ಲ ಇನ್ನು ಮುಂದಾದರು ಸಂಚಾರಿ ಠಾಣೆಯ ಪೋಲಿಸರು ರಸ್ತೆಯ ಎರಡು ಕಡೆ ಹಾಗೂ ಹೊಟೇಲ್ ಬಾರ್‌ಗಳ ಮುಂದೆ ಅಡ್ಡಾ ದಿಡ್ಡಿಯಾಗಿ ನಿಲ್ಲಿಸುವ ವಾಹನಗಳುನ್ನು ನಿಲ್ಲಿಸದಂತೆ ಕ್ರಮ ಕೈಗೊಂಡು ಸಾರ್ವಜನಿಕರ ಸಂಚಾರ ಕ್ಕೆ ಅನುಕೂಲ ಮಾಡಿ ಅಪಘಾತ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.
ಬಿ.ಹೆಚ್ ನಾಯಕ, ಶಂಕರ, ಮೌನೇಶ ನಾಯಕ, ನಾಗೇಂದ್ರ, ಶಿವರಾಜ, ರವಿ ದುರಗೇಶ, ಉಪೇಂದ್ರ, ವಿರೇಶ ಇನ್ನು ಅನೇಕರು ಮನವಿ ಪತ್ರ ಕೊಡುವ ಸಂದರ್ಭದಲ್ಲಿ ಇದ್ದರು.