ನವದೆಹಲಿ,ಆ.೩:ಬೆಂಗಳೂರು ಸಂಚಾರ ಕಡಿಮೆಮಾಡಿ ಬೆಂಗಳೂರಿಗೆ ಒಂದು ವಿಶೇಷವಾದ ದಿಕ್ಕು ರೂಪ ನೀಡಲು ಸುರಂಗ ಮಾರ್ಗ, ಮೇಲ್ಸೇತುವೆ ನಿರ್ಮಾಣ
ಸಂಬಂಧ ಬಿಡ್‌ಗಳನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನವದೆಹಲಿಯಲ್ಲಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಜಲ ವಿವಾದದ ಸಂಬಂಧ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ಎಲ್ಲೆಡೆ ಮಾತು ಕೇಳಿ ಬರುತ್ತಿದೆ. ದೆಹಲಿ, ಮುಂಬೈನಲ್ಲಿ ಬೆಂಗಳೂರಿಗಿಂತ ಹೆಚ್ಚು ಸಂಚಾರ ದಟ್ಟಣೆ ಇದ್ದರೂ ಆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿ ಖ್ಯಾತಿ ಹೊಂದಿರುವುದರಿಂದ ಎಲ್ಲರ ಗಮನಬಂಗಳೈರಿನ ಮೇಲಿದೆ. ಹಾಗಾಗಿ ಸಂಚಾರ ದಟ್ಟಣೆಯನ್ನುಕಡಿಮೆ ಮಾಡಲು ಜಾಗತಿಕವಾಗಿ ಬಿಡ್‌ಗಳನ್ನು ಆಹ್ವನಿಸಲಾಗಿದೆ ಎಂಧರು.
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಅವರ ಜತೆಯೂ ಚರ್ಚೆ ನಡೆಸಿದ್ದೇನೆ. ಕೆಂದ್ರ ಸರ್ಕಾರವೂ ಸಹಕಾರ ನೀಡಲು ಒಪ್ಪಿದೆ ಹಾಗಾಗಿ ಬೆಂಗಳೂರು ನಗರ ಸಂಚಾರ ದಟ್ಟಣೆಯನ್ನು ಕಡಿಮೆಮಡಲು ಸುರಂಗ ಮಾರ್ಗ ಮೇಲ್ಸೆತುವೆ ವಿವಿಧ ಮಾರ್ಗೋಪಾಯಗಳ ಬಗ್ಗೆ ಸಮಗ್ರ ಯೋಜನಾ ವರದಿಗಾಗಿ ವಿವಿಧ ಕಂಪನಿಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆಯ ಬಿಡ್‌ಗಳನ್ನು ಆಹ್ವಾನಿಸಿದ್ದೇವೆ.ಈ ತಿಂಗಳ ೮ ಬಿಡ್‌ಗಳನ್ನುಸಲ್ಲಿಸಲು ಕೊನೆಯ ದಿನವಾಗಿದೆ ಎಂದರು.
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆಮಾಡುವ ಸಂಬಂಧ ಈಗಾಗಲೇ ತಮ್ಮಜತೆ ಸಿಂಗಾಪುರ, ಇಸ್ರೇಲ್ ಸೇರಿದಂತೆ ಚೀನಾ ದೇಶಗಳವಿವಿಧ ಕಂಪನಿಗಳ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ ಎಲ್ಲರಿಗೂ ಯೋಜನಾ ವರದಿಯ ಬಿಡ್‌ನಲ್ಲಿ ಭಾಗವಹಿಸುವಂತೆ ಸೂಚಿಸಿದ್ದೇನೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಿ ಬೆಂಗಳೂರಿಗೆಹೊಸ ರೂಪು ನೀಡಲು ಸುರಂಗ ಮಾರ್ಗ ಫ್ಲೈಒವರ್ ಏನೆಲ್ಲಮಾಡಲು ಸಾಧ್ಯ ಇವೆಲ್ಲ ಬಗ್ಗೆಯೂ ಯೋಜನಾ ವರದಿಯನ್ನು ಕೇಳಿದ್ದೇವೆ.ಖಾಸಗಿ ಸಹಭಾಗಿತ್ವದಲ್ಲಿ ಪಿಪಿಪಿ ಮಾಡೆಲ್‌ನಲ್ಲಿ ಇಲ್ಲವೇ ಬೂಟ್ ಮಾದರಿಯಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಲಾಗುವುದು, ಯಾವುದು ಸೂಕ್ತವೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.ಬಿಬಿಎಂಪಿಯಲ್ಲಿ ಕಾಮಗಾರಿಗಳ ಪರಿಶೀಲನೆಗಾಗಿ ಸಮಿತಿ ಮಾಡಿದ್ದೇವೆ.ಹಿಂದೆಯಲ್ಲ ಟೆಂಡರ್ ಕರೆದು ಮೂರು ದಿನದಲ್ಲಿ ಕೆಲಸ ಆರಂಭಿಸಿ ಒಂದು ತಿಂಗಳೊಳಗೆ ಬಿಲ್‌ಗಳನ್ನು ಸಲ್ಲಿಸಲಾಗಿದೆ. ಇಷ್ಟು ವೇಗವಾಗಿ ನಡೆಸುವ ಆಡಳಿತಯಂತ್ರ ಯಾವ ರೀತಿ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ತಮಗಿದೆ ಎಂದು ವ್ಯಂಗ್ಯವಾಗಿ ಹೇಳಿದ ಅವರು, ಕಾಮಗಾರಿಗಳ ಗುಣಮಟ್ಟ ಎಲ್ಲವನ್ನೂ ನೋಡಿಕೊಂಡೆ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಪ್ರಾದಿಕಾರದ ಹಲವು ವ್ಯಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿವೆ ಸುಪ್ರೀಂಕೋರ್ಟ್‌ನಲ್ಲಿರುವ ವ್ಯಾಜ್ಯಗಳ ಸ್ಥಿತಿಗತಿ ಎಷ್ಟು ವ್ಯಾಜ್ಯಗಳು ಇತ್ಯರ್ಥವಾಗಿವೆ. ಇದರಿಂದಾಗಿರುವ ಲಾಭ, ಎಲ್ಲದ್ದರ ಬಗ್ಗೆಯೂ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆ ೩೫೦ ವ್ಯಾಜ್ಯಗಳು ಸುಪ್ರೀಂಕೋರ್ಟ್‌ನಲ್ಲಿವೆ ಎಂದರು.
ತುಂಗಭದ್ರ ನಾಲೆಗೆ ನೀರು
ತುಂಗಭದ್ರ ಅಚ್ಚುಕಟ್ಟು ಭಾಗದಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಹಾಗಾಗಿ, ತುಂಗಭದ್ರ ಜಲಾಶಯದಿಂದ ನಾಲೆಗಿಗೆ ನೀರು ಬಿಡಲು ಒಪ್ಪಿಗೆ ನೀಡಿದ್ದೇನೆ. ತುಂಗಭದ್ರ ಜಲಾಶಯ ಸಲಹಾಸಮಿತಿಯ ಅಧ್ಯಕ್ಷರನ್ನಾಗಿ ಸಚಿವ ಶಿವರಾಜ್ ತಂಗಡಗಿ ಅವರನ್ನು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಸಮಿತಿ ಕಾಲಕಾಲಕ್ಕೆ ಪರಿಶೀಲಿಸಿ ನಾಲೆಗೆ ನೀರು ಬಿಡಲಿದೆ ಎಂದರು.
ತುಂಗಭದ್ರ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಬೇಕು ಎಂದು ಕೊಪ್ಪಳ, ರಾಯಚೂರು, ದಾವಣಗೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರು ತಮಗೆ ಮನವಿ ಮಾಡಿದ್ದರು. ಹಾಗೆಯೇ ರೈತರು ನೀರು ಹರಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸಲು ಒಪ್ಪಿಗೆ ನೀಡಿದ್ದೇನೆ ಎಂದರು.ಸುಪ್ರೀಂಕೋರ್ಟ್‌ನಲ್ಲಿರುವ ಜಲ ವಿವಾದಗಳ ಬಗ್ಗೆಯೂ ಕಾನೂನು ತಜ್ಞರ ಜತೆ ಚರ್ಚಿಸಿದ್ದೇನೆ. ಜಲವಿವಾದಗಳನ್ನುಕಾಲಮಿತಿಯಲ್ಲಿ ಬಗೆಹರಿಸುವಂತೆಯೂ ಚಿಂತನೆ ನಡೆದಿದೆ ಎಂದರು.