ಸಂಚಾರಿ ಪೋಲಿಸರ ಹಾವಳಿ ಸಾರ್ವಜನಿಕರಲ್ಲಿ ಭಯ

ಬೀದರ :ಸೆ.9:ಜಿಲ್ಲೆಯಲ್ಲಿ ಸಂಚಾರಿ ಪೋಲಿಸರ ಹಾವಳಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಾಗಿದೆ. ಈ ಹಿಂದೆ ಬೀದರ ಜಿಲ್ಲೆಯಲ್ಲಿ ಸಂಚಾರಿ ಪೋಲಿಸರು ದ್ವಿಚರ್ಕವಾಹನಗಳ ತಪಾಸಣೆ ವೇಳೆಯಲ್ಲಿ ಪೋಲಿಸರಿಗೆ ಹೇದರಿ ಸುಮಾರ 3 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಗೆ ಸಣ್ಣ ಪುಟ್ಟ ಬೀದಿ ವ್ಯಾಪರಸ್ಥರಿಗೆ ತುಂಬಾ ತೊಂದರೆ ಆಗುತ್ತಿದ್ದು, ಹಾಗೂ ನಿರುದ್ಯೋಗ ಸಮಸ್ಯೆ ಕೂಡ ತುಂಬಾ ಇದೆ. ಇಂತಹ ಪರಿಸ್ಥಿತಿಯಲ್ಲಿ ಒಂದೊಂದು ದ್ವಿಚಕ್ರ ವಾಹನಗಳಿಗೆ ಕನಿಷ್ಠ 1,000.00 ರೂಪಾಯಿ ದಂಡ ವಿಧಿಸುತ್ತಿದ್ದಾರೆ ಹಾಗೂ ಶಾಲಾ ಮಕ್ಕಳಿಗೆ ಶಾಲೆಯಿಂದ ಪೋಷಕರು ಮನೆಗೆ ಹೋಗು ಬರುವಾಗ ಕೂಡ ದ್ವಿಚಕರ ವಾಹನಗಳು ತಡೆದು ದಂಡ ವಿಧಿಸುತ್ತಿದ್ದಾರೆ.

ಬೀದರ ನಗರದಲ್ಲಿ ಅಂಬೇಡ್ಕರ ವೃತ್ತ ಹತ್ತಿರ ಇರುವಂತಹ 5 ರಸ್ತೆಗಳಲ್ಲಿ ಕೂಡ ಪೋಲಿಸರು ವಾಹನಗಳ ತಪಾಸಣೆ ಮಾಡುತ್ತಿದ್ದು ಸಾರ್ವಜನಿಕರು ತುಂಬಾ ಟ್ರಾಫಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ.

ಕರ್ನಾಟಕ ಸರಕಾರದ ಆದೇಶದಂತೆ ಮನಬಂದಂತೆ ಸಾರ್ವಜನಿಕ ಸ್ಥಳದಲ್ಲಿ ದ್ವಿಚಕ್ರ ವಾಹನಗಳಿಗೆ ತಪಾಸಣೆ ಮಾಡುವಂತಿಲ್ಲ ಎಂದು ಸರಕಾರ ಆದೇಶವನ್ನು ನೀಡಿರುತ್ತದೆ. ಒಂದುವೇಳೆ ಯಾರಮೇಲಾದರು ಸಂಶಯ ಬಂದರೆ ತಪಾಸಣೆ ಮಾಡಬಹುದು ಅದಕ್ಕೆನು ಅಭ್ಯಂತರವಿಲ್ಲಾ, ಆದರೆ ಪದೇ ಪದೇ ಒಂದೇ ಸ್ಥಳದಲ್ಲಿ ನಿಂತು ದಿನ ಕೆಲಸಕ್ಕೆ ಹೋಗುವ ವಾಹನಗಳು ಶಾಲೆಗೆ ಹೋಗುವ ಪೋಷಕರ ವಾಹನಗಳಿಗೆ ಪ್ರತಿ ದಿನ ತಪಾಸಣೆ ಮಾಡುತ್ತಿದ್ದು ತುಂಬಾ ಸಾರ್ವಜನಿಕರಿಗೆ ತೊಂದರೆ ಕೊಡುವಂತಾಗಿದೆ.

ಕಾನೂನು ಎಲ್ಲರಿಗೂ ಸರಿಸಮಾನವೆಂದು ನಂಬಿರುತ್ತೇನೆ. ಮುಖನೋಡಿ ಒಂದು ವಾಹನಕ್ಕೆ ದಂಡವಿಧಿಸುವುದು ಮತ್ತೊಂದು ಕಡೆ ಯಾರದೂ ಕರೆಬಂದರೆ ಕೆಲವು ವಾಹನಗಳಿಗೆ ದಂಡ ವಿಧಿಸದೆ ಬಿಡುವುದು, ಇಂತಹ ಬೀದರ ಸಂಚಾರಿ ಪೋಲಿಸರು ಮಾಡುತ್ತಿದ್ದಾರೆ. ಈ ವಿಷಯವನ್ನು ಕೂಡ ಗಂಭೀರವಾಗಿ ಪರಿಗಣಿಸಬೇಕು.ಅದಕ್ಕಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರವು ಬೀದರ ಸಂಚಾರಿ ಪೋಲಿಸರಿಗೆ ಕಟ್ಟು ನಿಟ್ಟಾಗಿ ಕ್ರಮ ಜರುಗಿಸಬೇಕೆಂದು ಬೀದರ ಜನತಾ ದಳ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಅಭಿ ಕಾಳೆ ಅವರು ಇಂದು ಸೆಪ್ಟೆಂಬರ 8 ರಂದು ಗೃಹ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದ್ದಾರೆ.