ಬೆಂಗಳೂರು,ಜೂ.೧- ಲಾಂಗ್ ಹಿಡಿದು ದ್ವಿಚಕ್ರ ವಾಹನ ಸವಾರರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ೧೦ ಸಾವಿರ ರೂಗಳನ್ನು ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ್ ಖದೀಮನನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಉಪ್ಪಾರಪೇಟೆ ಸಂಚಾರ ಪೊಲೀಸರು ಸೆರೆಹಿಡಿದಿದ್ದಾರೆ.
ಸೆರೆ ಹಿಡಿದ ಖದೀಮನನ್ನು ಉಪ್ಪಾರಪೇಟೆ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಒಪ್ಪಿಸಲಾಗಿದ್ದು ಆತನಿಂದ ಲಾಂಗ್ ಮತ್ತು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.
ಪ್ಯಾಲೆಸ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪ್ಪಾರಪೇಟೆಯ ಸಂಚಾರ ಠಾಣೆಯ ಎಎಸ್‌ಐ ರವೀಂದ್ರ ರವರು ಹಾಗೂ ಮುಖ್ಯಪೇದೆಗಳಾದ ಲಕ್ಷ್ಮಣಯ್ಯ ಮತ್ತು ಮರಿಸ್ವಾಮಿ ರವರುಗಳು ಆರೋಪಿಯನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು ಉಪ್ಪಾರಪೇಟೆ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಒಪ್ಪಿಸಿರುತ್ತಾರೆ.
ಉಪ್ಪಾರಪೇಟೆ ಸಂಚಾರ ಪೊಲೀಸರ ಸಮಯ ಪ್ರಜ್ಞೆಯ ಕಾರ್ಯಾಚರಣೆಗೆ ಕಮೀಷನರ್ ದಯಾನಂದ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.