ಸಂಚಾರಿ ನಿಯಮ ಪಾಲಿಸಿ ಎಎಸ್‌ಐ ಮನವಿ

ಮಹದೇವಪುರ, ಜ. ೫- ಕೊರೊನಾ ಸಂದರ್ಭದಲ್ಲಿ ಭಯದಲ್ಲಿ ಪೊಲೀಸ್ ಸಿಬ್ಬಂದಿಗಳು ಕೊರೊನಾ ವಾರಿಯರ್‌ಗಳಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದು, ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಡಿ ಎಂದು ಎಎಸ್‌ಐ ನಾರಾಯಣ ಸ್ವಾಮಿ ಮನವಿ ಮಾಡಿದರು.
ಕೆಆರ್‌ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿರುವ ನಾರಾಯಣ ಸ್ವಾಮಿ ರವರಿಗೆ ಮಹದೇವಪುರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಸುಮಾರು ೧೦ ಸಿಬ್ಬಂದಿಗಳೊಂದಿಗೆ ಕಣ್ಣಿಗೆ ಕಾಣುವ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ,
ಹಿರಿಯ ಅಧಿಕಾರಿಗಳ ಆದೇಶದಂತೆ ವಾಹನ ದಾಖಲೆಗಳು ಪರಿಶೀಲನೆ ಮಾಡಲ್ಲ ಕೇವಲ ಕಣ್ಣಿಗೆ ಕಂಡ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಮಾತ್ರ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ, ದಯವಿಟ್ಟು ಯಾರೂ ನಿಯಮ ಉಲ್ಲಂಘನೆ ಮಾಡಬೇಡಿ ದಂಡವೂ ಸಹ ನೀವು ನಮ್ಮ ಬಳಿಯೇ ಕಟ್ಟಬೇಕಾಗಿಲ್ಲ ನ್ಯಾಯಾಲಯದ ಮೂಲಕವೂ ಕಟ್ಟಬಹುದು ಕೊರೋನಾ ಸೋಂಕು ಹರಡುವ ಹಿನ್ನೆಲೆ ನಮ್ಮ ಆರೋಗ್ಯ ಮತ್ತು ನಿಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಸೂಕ್ತ ಸರ್ಕಾರಿ ನಿಯಮಗಳನ್ನು ಪಾಲಿಸಿ ಎಂದರು.