ಸಂಚಾರಿ ನಿಯಮ ಪಾಲಿಸಿ ಅಮೂಲ್ಯ ಜೀವ ಉಳಿಸಿ : ಮಡಿವಾಳಪ್ಪ

(ಸಂಜೆವಾಣಿ ವಾರ್ತೆ)
ಔರಾದ :ಜು.15: ಪ್ರತಿನಿತ್ಯ ಪಟ್ಟಣದಲ್ಲಿ ರಸ್ತೆ ಸುರಕ್ಷತಾ ನಿಯಮವನ್ನು ಉಲ್ಲಂಘಿಸಿ ನೂರಾರು ಮಂದಿ ಅಪಘಾತಕ್ಕಿಡಾಗುತ್ತಿದ್ದಾರೆ, ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಪಾಲಿಸಿ, ಅಮೂಲ್ಯವಾದ ಜೀವ ಉಳಿಸಿಕೊಳ್ಳಬೇಕೆಂದು ಎಂದು ಪಿಎಸಐ ಮಡಿವಾಳಪ್ಪ ಬಾಗೋಡಿ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಾಹನಗಳ ವೇಗದ ಮಿತಿ ಕಡಿಮೆಗೆuಟಿಜeಜಿiಟಿeಜಳಿಸಿ ಪ್ರತಿಯೊಬ್ಬರೂ ತಾಳ್ಮೆಯಿಂದ ವಾಹನ ಚಾಲನೆ ಮಾಡಿದಾಗ ಎಷ್ಟೋ ಅಪಘಾತಗಳನ್ನು ತಡೆಯಲು ಸಾಧ್ಯವಿದೆ. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ತಿಳಿದು???ಂಡು ವಾಹನ ಚಾಲನೆ ಮಾಡುವುದು ಸೂಕ್ತ, ಮತ್ತು ಪ್ರತಿಯೊಬ್ಬರು ಪರವಾನಗಿ ಪಡೆಯುವುದು ಕಡ್ಡಾಯ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ವಾಹನ ನೀಡಿದರೆ ಅಂತಹವರ ಪಾಲಕರಿಗೆ ದಂಡ ಜೊತೆಗೆ ಮಾರಣಾಂತಿಕ ಅಪಘಾತವನ್ನು ಉಂಟುಮಾಡುವ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು
ಪ್ರಾಚಾರ್ಯ ಸೂರ್ಯಕಾಂತ ಚಿದ್ರೆ ಅವರು ಮಾತನಾಡಿ, ಅಸಹಾಯಕರು, ಅಂಗವಿಕಲರಿಗೆ ಹಾಗೂ ಅಪಘಾತದಲ್ಲಿ ಗಾಯ???ಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೆuಟಿಜeಜಿiಟಿeಜಡಿಸುವ ಮೂಲಕ ಜೀವ ಉಳಿಸುವ ಕೆಲಸಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ. ಅಶೋಕ ಕೋರೆ, ಸಚ್ಚಿದಾನಂದ ರುಮ್ಮಾ, ಸಂಜೀವಕುಮಾರ ತಾಂದಳೆ, ವೇದಪ್ರಕಾಶ ಆರ್ಯ, ಊರ್ವಶಿ ಕೊಡ್ಲಿ, ಅಂಬಿಕಾ, ವಿನಾಯಕ ಕೊತಮಿರ್, ದಯಾನಂದ ಬಾವಗೆ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.