ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಅನುಪಮ ಅಗರವಾಲ್ ಕರೆ

(ಸಂಜೆವಾಣಿ ವಾರ್ತೆ)
ಇಂಡಿ:ಎ.3: ನಗರದ ಪೊಲೀಸ ಉಪಾಧಿಕ್ಷಕರ ಕಛೇರಿಯ ಸಭಾ ಭವನದಲ್ಲಿ ಆಯೋಜಿಸಿದ ಜನ ಸ್ಪಂದನಾ ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೋಂಡು ಮಾತನಾಡಿದ ಅವರು ಬೈಕ ಮೇಲೆ 3ಜನ ಸವಾರರು, ವಾಹಾನ ಚಲಾಯಿಸುವಾಗ ಸೀಟ ಬೆಲ್ಟ ಹಾಕದೆ ವಾಹಾನ ಚಲಾಯಿಸುವುದು, ಹೆಲಿಮಿಟ ಧರಿಸದೆ ಇರುವುದು, ಜನ ಪ್ರಯಾಣ ಮಾಡುತ್ತಿದ್ದರೆ ಅಂತವರನ್ನು ಧಂಡ ವಿಧಿಸಲು ಟ್ರಾಪಿಕ ಪೊಲೀಸರಿಗೆ ನಿರ್ಧೇಶನ ನಿಡಿದ್ದೆವೆ. ಒಬ್ಬ ಡ್ರಾವಿಂಗ ಮಾಡುವಾತ ತನ್ನ ಕುಟುಂಬದ ನಿರ್ವಹಣೆ ಮಾಡುವ ಜವಾಬ್ದಾರಿ ಇರುತ್ತದೆ. ಅವನು ಅಪಘಾತದಲ್ಲಿ ಮೃತ ಪಟ್ಟರೆ ಆ ಕುಟುಂಬ ನಿರ್ವಹೀಸುವರು ಯಾರು? ಅಂತಹ ಕುಟುಂಬಗಳು ಬೀದಿಗೆ ಬರುತ್ತದೆ. ಅದನ್ನು ತಪ್ಪಿಸಲು ನಾವು ಇವತ್ತು ಹೆಚ್ಚಿನ ಗಮನ ಕೋಡುತ್ತೇವೆ. ನಮ್ಮ ಉದ್ದೇಶ ಅಪಘಾತದಿಂದ ಜೀವ ಉಳಿಸಿಕೋಳ್ಳಬೇಕು ಎನ್ನುವುದೆ ಹೋರತಾಗಿ ಧಂಡ ಸಂಗ್ರಹೀಸುವುದಲ್ಲ ಎಂದು ಅವರು ಹೇಳಿದರು. ಈ ಭಾಗದಲ್ಲಿ ಮಟಕಾ, ಮಾವಾ, ಗಾಂಜಾ, ಜುಜಾಟ, ಇಸ್ಪೇಟ, ಹೀಗೆ ಹಲವಾರು ಕಾನೂನು ಭಾಹೀರ ಚಟವಟಿಕೆಗಳನ್ನು ಮಟ್ಟ ಹಾಕುವಲ್ಲಿ ಯಸೆಶ್ವಿಯಾದ ಡಿ,ವೈ,ಎಸ್,ಪಿ, ಶ್ರೀಧರ ದೋಡ್ಡಿ ಗಾಹೂ ಅವರ ಟೀಮಿಗೆ ದನ್ಯವಾದಗಳು ಎಂದು ಹೇಳಿದರು. ತಾಲೂಕಿನ ಮಾರ್ಸನಳ್ಳಿಯಲ್ಲಿ ನಡೆದ ದುರ್ಘಟೆನೆಗೆ ಕಾರಣರಾದ ಅಪರಾದಿಗಳನ್ನು ಹಡುಕಿಕೋಟ್ಟ ಕಿರ್ತಿ ಡಿ,ವೈ,ಎಸ್,ಪಿ, ದೋಡ್ಡಿ ಹಾಗೂ ಅವರ ತಂಡದವರಿಗೆ ಸಲ್ಲುತ್ತದೆ ಎಂದು ಇದೇ ಸಂದಭ್ದಲ್ಲಿ ಶ್ಲಾಗಿಸಿದರು. 112 ವಾಹಾನದ ಸಾರ್ವಜನಿಕರು ಸದುಉಪಯೋಗ ಪಡೆದುಳೊಳ್ಳ ಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ ಪುರಸಭೆ ಸದಸ್ಯರಗಳು ದೇವೆಂದ್ರ ಕುಂಬಾರ, ಬುದ್ದುಗೌಡ ಪಾಟೀಲ, ಸಂಘಟನೆಗಳ ಮುಖಂಡರಾದ ಮುತ್ತಪ್ಪ ಪೋತೆ, ಸೋಮಣ್ಣ ಮ್ಯಾಕೇರಿ, ವಿನಾಯಕ ಗುಣಸಾಗರ, ತಾಲೂಕಾ ಪಂಚಾಯತ ಸದಸ್ಯರಾದ ಗಣಪತಿ ಬಾಣಿಕೋಲ, ಜಾವಿದ ಮೋಮಿನ. ಈ ಕಾರ್ಯಕ್ರಮದ ನಿರೂಪಣೆ ಮಾಡಿದ ಸಿ,ಪಿ,ಆಯ್, ರಾಜಶೇಖರ ಬಡದೇಸಾರ, ಈ ಸಭೆಯಲ್ಲಿ ಉಪಾಸ್ಥಿತರಿದ್ದ ಸಿ,ಪಿ,ಆಯ್, ಚಿದಾಂಬರಮ, ಶಹರ ಪೊಲೀಸ ಠಾಣೆ ಪಿ,ಎಸ್,ಆಯ್, ಮಾಳಪ್ಪ ಪೂಜಾರಿ, ಗ್ರಾಮಿಣ ಪೊಲೀಸ ಠಾಣೆ ಪಿ,ಎಸ್,ಆಯ್, ವಿನೋದ ದೊಡಮನಿ, ಝಳಕಿ ಪಿ,ಎಸ್,ಆಯ್, ಚಡಚಣ ಪಿ,ಎಸ್,ಆಯ್, ಹಾಗೂ ಸಿಂದಗಿ ಸಿ,ಪಿ,ಆಯ್, ಮತ್ತು ಪಿ,ಎಸ್,ಆಯ್. ನಗರದ ಪುರಸಭೆ ಅಧ್ಯಕ್ಷರು,ಉಪಾಧ್ಯಕ್ಷರು, ಹಾಗೂ ಸದಸ್ಯರು, ಪ್ರಗತಿ ಪರ ರೈತರು,ಬಂಗಾರ ಅಂಗಡಿ ಮಾಲಿಕರು, ಗ್ರಾಮಿಣ ಬಾಗದಿಂದ ಬಂದಿರುವ ಯುವಕರು ಹೀಗೆ ಹಲವಾರು ಜನರು ಬಂದು ಕಾರ್ಯಕ್ರಮವನ್ನು ಯಶಶ್ವಿಯಾಗಿಸಿದ್ದರು.