ಸಂಚಾರಿ ನಿಯಮ ಉಲ್ಲಂಘಿಸಿದರೆ ವಾಹನ ತಡೆಯಲ್ಲ ಮನೆಗೆ ನೋಟೀಸ್ ಬರುತ್ತೆ


* ಬೆಂಗಳೂರುನಂತೆ ಕಂಪ್ಲೇಂಟ್ ಆಟೋ ರಿಜಿಸ್ಟರ್
* ಗಾಡಿ ಯಾರೇ ಓಡಿಸಿದರು ಅದರ ಮಾಲೀಕನ‌ ಮನೆಗೆ ದಂಡದ ನೋಟೀಸ್
* 7 ದಿನದಲ್ಲಿ ದಂಡ ಕಟ್ಟಬೇಕು.
* ದಂಡ ಕಟ್ಟದಿದ್ದರೆ 3 ತಿಂಗಳು ಜೈಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದಲ್ಲಿ ಇನ್ನು ಮುಂದೆ ನೋ ಪಾರ್ಕಿಂಗ್ ನಲ್ಲಿ ವಾಹನ‌ ನಿಲ್ಲಿಸುವ,  ಅಡ್ಡಾದಿಡ್ಡಿಯಾಗಿ,  ನಿರ್ಲಕ್ಷ್ಯತನದಿಂದ, ಮೊಬೈಲ್ ಬಳಸಿ ವಾಹನ ಚಲಾಯಿಸುವ, ಟ್ರಾಫಿಕ್ ಸಿಗ್ನಲ್‌ ಜಂಪ್ ಮಾಡುವವರಿಗೆ ಟ್ರಾಫಿಕ್ ಪೊಲೀಸರು ತಡೆದು ದಂಡ ವಿಧಿಸಲ್ಲ. ನೀವು ಮಾಡಿದ ತಪ್ಪಿನ ಪೋಟೋ ಸಮೇತ ದಂಡ ಕಟ್ಟಲು ನಿಮಗೆ, ಇಲ್ಲ  ವಾಹನದ ಮಾಲೀಕನ ಮನೆಗೆ ನೋಟೀಸ್ ಬರಲಿದೆ.
 ನಗರದಲ್ಲಿನ ಸಂಚಾರ ಸುರಕ್ಷತೆ ಹಾಗೂ ಸುವ್ಯವಸ್ಥೆಯ ಉದ್ದೇಶದಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಿದ ಟ್ರಾಫಿಕ್  ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಸಾರ್ವಜನಿಕ ರಸ್ತೆಗಳಲ್ಲಿ ಮೋಟಾ‌ರ್ ವಾಹನ ಕಾಯಿದೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿ ಅಥವಾ ವಾಹನದ ಮಾಲೀಕರ ಫೋಟೋಗಳನ್ನು ಸಂಗ್ರಹಿಸಿ.  ಎನ್‌ರ್ಸ್‌ಮೆಂಟ್ ಆಟೋಮೇಶನ್ ಸೆಂಟರ್, ಸಂಚಾರ ಪೊಲೀಸ್ ಠಾಣೆಯ  ಮೂಲಕ.  ಟ್ರಾಫಿಕ್ ರೂಲ್ಸ್  ಉಲ್ಲಂಘನೆ ಮಾಡಿದವರ    ಸಂಬಂಧಪಟ್ಟ ವಾಹನ ಮಾಲೀಕರ ಮನೆಯ ವಿಳಾಸಕ್ಕೆ ಪೊಲೀಸ್ ನೊಟೀಸ್ ಕಳುಹಿಸಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.
ತಪ್ಪು ಮಾಡಿದವರು  ನೋಟೀಸ್ ತಲುಪಿದ 7 ದಿನಗಳೊಳಗಾಗಿ ಸಂಚಾರ ಠಾಣೆಗೆ ಬಂದು ದಾಖಲೆ ನೀಡಿ ದಂಡ ಪಾವತಿಸಬೇಕು. ತಪ್ಪಿದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಿದೆ.
ವಾಹನ ಚಾಲನೆ ಮಾಡಿದವರು ಯಾರು ಎಂಬುದಕ್ಕಿಂತ ಮಾಲೀಕ ಎಚ್ಚರದಿಂದರಬೇಕಿದೆ. 
ಆದ್ದರಿಂದ ವಾಹನ ಸವಾರರು ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ಪೊಲೀಸ್‌ ರು ಕೋರಿದ್ದಾರೆ.