ಸಂಚಾರಿ ನಿಯಮಗಳ ಕುರಿತಂತೆ ಅರಿವು ಮೂಡಿಸಲು ಪೊಲೀಸ್ ಇಲಾಖೆಯಿಂದ ಬೈಕ್ ಜಾಥಾ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಸೆ.10; ಸಂಚಾರಿ ನಿಯಮಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಶಿವಮೊಗ್ಗ ನಗರದಲ್ಲಿ ಬೈಕ್ ಜಾಥಾಹಮ್ಮಿಕೊಂಡಿತ್ತು.ಬುಲ್ಸ್ ಆಫ್ ಶಿವಮೊಗ್ಗ, ಬೈಕರ್ಸ್ ಆಫ್ ಶಿವಮೊಗ್ಗ, ರಾಯಲ್ ರೋಲಿಂಗ್ ಮಾಂಕ್ಸ್ಶಿ ವಮೊಗ್ಗ, ರೋಡ್ ಥ್ರಿಲ್ಲರ್ಸ್ ಶಿವಮೊಗ್ಗ, ಮಲ್ನಾಡ್ ಟಸ್ಕರ್ಸ್ ಶಿವಮೊಗ್ಗ, ಕೆಟಿಎಂ ಶಿವಮೊಗ್ಗ ಮತ್ತು ಇತರೆ ಕ್ಲಬ್ ಗಳ ಸಹಯೋಗದಲ್ಲಿ ಬೈಕ್ ಜಾಥಾ ಆಯೋಜಿಸಲಾಗಿತ್ತು.ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಕೂಡ ಜಾಥಾದಲ್ಲಿ ಬುಲೆಟ್ ಬೈಕ್ಓಡಿಸಿ ಗಮನ ಸೆಳೆದರು. ಡಿಎಆರ್ ಮೈದಾನದಿಂದ ಆರಂಭವಾದ ಜಾಥಾವು ಐಬಿ ವೃತ್ತ, ಆಲ್ಕೋಳಸರ್ಕಲ್, ವಿನೋಬನಗರ ಪೊಲೀಸ್ ಚೌಕಿ,ಉಷಾ ನರ್ಸಿಂಗ್ ಹೋಂ ಸರ್ಕಲ್, ಮಹಾವೀರ ಸರ್ಕಲ್, ಕರ್ನಾಟಕ ಸಂಘ, ಹೊಳೆ ಬಸ್ ನಿಲ್ದಾಣ,ಎಂಆರ್’ಎಸ್ ವೃತ್ತ, ನ್ಯೂ ಮಂಡ್ಲಿ, ಗೋಪಾಳ, ಆಲ್ಕೋಳ ವೃತ್ತ, ಐಬಿ ವೃತ್ತದ ಮೂಲಕ ಡಿಐಆರ್ ಮೈದಾನದಲ್ಲಿ ಜಾಥಾ ಅಂತ್ಯಗೊಂಡಿತು.ಜಾಥಾದಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಸುರೇಶ್,
ಡಿಎಆರ್ ಆರ್.ಪಿ.ಐ ಪ್ರಶಾಂತ್, ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಸೇರಿದಂತೆ ಬೈಕ್ ಕ್ಲಬ್ ಗಳ ಸದಸ್ಯರು ಉಪಸ್ಥಿತರಿದ್ದರು.