ಸಂಚಾರಿ ಕೋವಿಡ್ ತಪಾಸಣಾ

ಸಿರುಗುಪ್ಪ ಜೂ 10 : ಅನಗತ್ಯವಾಗಿ ರಸ್ತೆಗಿಳಿದ ದ್ವಿಚಕ್ರವಾಹನ ಸವಾರರನ್ನು ನಗರದ ಮಹಾತ್ಮ ಗಾಂಧೀಜಿ ವೃತ್ತದ ಬಳಿ ಪೊಲೀಸ್ ಇಲಾಖೆಯಿಂದ ತಡೆಗಟ್ಟಿ ಆರೋಗ್ಯ ಇಲಾಖೆಯವತಿಯಿಂದ ಕೋವಿಡ್-19 ಪರೀಕ್ಷೆ ತಪಾಸಣೆ ಮಾಡಲಾಯಿತು.
ಎ.ಎಸ್.ಐ ಕೊಟ್ರಬಸಪ್ಪ ಮಾತನಾಡಿ ಹೋಮ್ ಐಸುಲೇಶನ್‍ಲ್ಲಿರುವ ಸೋಂಕಿತರು ಆರೋಗ್ಯ ಅಧಿಕಾರಿಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ ಎನ್ನುವ ಮಾಹಿತಿ ಇರುವುದರಿಂದ ಮೇಲಾಧಿಕಾರಿಗಳ ಆದೇಶದಂತೆ ಕರೋನಾ ನಿಯಂತ್ರಣಕ್ಕಾಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಅನಗತ್ಯವಾಗಿ ರಸ್ತೆಯ ಮೇಲೆ ಓಡಾಡುವವರಿಂದ ಇನ್ನಿತರರಿಗೆ ಕರೋನಾ ಹರಡದಂತೆ ಕೋವಿಡ್ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಅಭಿಪ್ರಾಯಿಸಿದರು.