
ದಾವಣಗೆರೆ. ಫೆ.22; ಸಾರ್ವಜನಿಕರು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯತಿಯಲ್ಲಿ ಪಾವತಿಸದ ದಂಡದ ಮೊತ್ತವನ್ನು ಠಾಣೆಗಳಲ್ಲಿ, ಆನ್ ಲೈನ್ ಮೂಲಕ ಪಾವತಿಸುತ್ತಿದ್ದು, ಇ-ಚಲನ್ ಪಾವತಿ ಮಾಡಲು ಬಹಳ ಜನರಿಗೆ ಸರಿಯಾಗಿ ಮಾಹಿತಿ ಸಿಕ್ಕಿರುವುದಿಲ್ಲ. ದಯವಿಟ್ಟು ಇ-ಚಲನ್ ದಂಡದ ಮೊತ್ತ ರಿಯಾಯಿತಿ ಪಾವತಿಸುವ ದಿನಾಂಕವನ್ನು ಫೆ. 28ರ ವರೆಗೆ ಮುಂದುವರೆಸಿದರೆ ಬಹಳಷ್ಟು ಜನರಿಗೆ ಇದರಿಂದ ದಂಡ ಪಾವತಿಗೆ ಅನುಕೂಲವಾಗಲಿದೆ.ಜಿಲ್ಲಾ ಪೊಲೀಸ್ ಅಧೀಕ್ಷಕರು, ಅಧಿಕಾರಿಗಳು ಈ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ಇ-ಚಲನ್ ಮೂಲಕ ದಂಡ ಪಾವತಿಸಲು ದಿನಾಂಕವನ್ನು ಫೆ. 28ರ ವರೆಗೆ ಮುಂದುವರೆಸಬೇಕೆಂದು ಕನ್ನಡ ಸಮರ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷರು ಹಾಗೂ ದಾವಣಗೆರೆ ತಾ. ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘದ ಅಧ್ಯಕ್ಷ ಎಂ.ಮನು ಮನವಿ ಮಾಡಿದ್ದಾರೆ.