ಸಂಚಾರಿ ಇನ್ಸ್‌ಪೆಕ್ಟರ್‌ಗೆ ಅರ್ಚಕರಿಂದ ಸನ್ಮಾನ

ಕನಕಪುರ, ನ.೬:ನಗರದ ಕಾಳಿಕಾಂಬ ದೇವಾಲಯದಲ್ಲಿ ಶರನ್ನವರಾತ್ರಿಯ ವೇಳೆ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್‍ಯಕ್ರಮಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಿದ ಟ್ರಾಫಿಕ್ ಸಬ್ ಇನ್ಸ್ ಫೆಕ್ಟರ್ ಭಗವಾನ್‌ವರನ್ನು ದೇವಾಲಯದ ಅರ್ಚಕರು ಮತ್ತು ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿದರು.
ಇತ್ತೀಚಿಗೆ ಕಳೆದ ೯ದಿನಿಗಳ ಜರುಗಿದ ಶರನ್ನವರಾತ್ರಿಯ ಪೂಜೆಯನ್ನು ನಗರದ ಕಾಳಿಕಾಂಬ ದೇವಾಲಯದಲ್ಲಿ ಹಮಿಕೊಳ್ಳಲಾಗಿದ್ದು ಈಸಂದರ್ಭದಲ್ಲಿ ವಿಶೇಷ ಪೂಜೆಯನ್ನು ಅಮ್ಮನವರಿಗೆ ಹಮ್ಮಿಕೊಂಡಿದ್ದ ದಂಪತಿಗಳನ್ನು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವರಾಮಚಾರಿ, ಕಾರ್‍ಯದರ್ಶಿ ಮತ್ತು ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಭಗವಾನ್ ಮತ್ತು ಕುಟುಂಬದವರನ್ನು ಸಹ ಸನ್ಮಾನಿಸಿದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವರಾಮಚಾರಿ, ಹಾಗೂ ಕಾರ್‍ಯದರ್ಶಿ ಜಯರಾಮಚಾರಿ ಪ್ರತಿದಿನ ಶರನ್ನವರಾತ್ರಿಯ ವೇಳೆ ಅಮ್ಮನವರನ್ನು ಪೂಜಿಸುವುದರ ಜೊತೆಗೆ ವಿಶೇಷ ಪೂಜೆಗೆ ಪೊಲೀಸ್‌ರು ಬಂದು ತಮ್ಮ ಸೇವೆಯನ್ನು ಮಾಡುವುದು ಬಹಳ ವಿಶೇಷವಾದ ವಿಚಾರವೆಂದರು.
ಇತ್ತೀಚಿಗೆ ನಗರದ ಕಾಳಿಕಾಂಬ ದೇವಾಲಯದಲ್ಲಿ ಶರನ್ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಟ್ರಾಫಿಕ್ ಸಬ್ ಇನ್ಸ್ ಫೆಕ್ಟರ್ ಭಗವಾನ್ ಮತ್ತು ಕುಟುಂಬದವರನ್ನು ದೇವಾಲಯದ ಮುಖ್ಯ ಅZಕರಾದ ಕೇಶವಚಾರ್ ಮತ್ತು ಟ್ರಸ್ಟಿನ ಅದ್ಯಕ್ಷರಾದ ಶಿವರಾಮಚಾರ್ ಸನ್ಮಾನಿಸಿದರು.