ಸಂಚಾರಕ್ಕೆ ಮುಕ್ತವಾಗದ ಫ್ಲೈ ಓವರ್ : ಟ್ರಾಫಿಕ್ ಕಿರಿಕಿರಿಗೆ ವಾಹನ ಸವಾರರು ತತ್ತರ..! 

ಶಿವಮೊಗ್ಗ, ಜೂ.೧:  ನಗರದ ಹೊಳೆ ಬಸ್ ನಿಲ್ದಾಣದ ರೈಲ್ವೆ ಗೇಟ್ ಬಳಿಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ.ರೈಲುಗಳ ಸಂಚಾರದ ವೇಳೆ, ಗೇಟ್ ಬಂದ್ ಮಾಡಿದ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿತಲೆದೋರುತ್ತಿದೆ. ಎರಡು ಕಡೆಯಿಂದ ನೂರಾರು ವಾಹನಗಳು ಏಕಕಾಲಕ್ಕೆ ನುಗ್ಗುತ್ತವೆ.
ಜೊತೆಗೆ ಕೆಲ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುತ್ತಾರೆ. ಈ ಎಲ್ಲಕಾರಣಗಳಿಂದ ಟ್ರಾಫಿಕ್ ಜಾಮ್ ಏರ್ಪಡುತ್ತಿದೆ.ಸ್ಥಳದಲ್ಲಿ ಟ್ರಾಫಿಕ್ ಪೊಲೀಸರಿದ್ದರೂ ಸುಗಮ ವಾಹನ ಸಂಚಾರ ದುಸ್ತರವಾಗುತ್ತಿದೆ.ಇದರಿಂದ ತುರ್ತು ಕೆಲಸಕಾರ್ಯಗಳಿಗೆ ತೆರಳಬೇಕಾದ ವೇಳೆ, ತೀವ್ರ ಸಂಕಷ್ಟಎದುರಿಸುವಂತಾಗಿದೆ. ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ದಟ್ಟಣೆಯಲ್ಲಿ
ಸಿಲುಕಿ ಬೀಳುವಂತಾಗುತ್ತದೆ ಎಂದು ಕೆಲ ವಾಹನ ಸವಾರರು ದೂರುತ್ತಾರೆ.ಸದರಿ ಸ್ಥಳದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ, ಟ್ರಾಫಿಕ್ ಜಾಮ್ ಸರ್ವೇಸಾಮಾನ್ಯಎಂಬಂತಾಗಿದೆ. ಸಾಕಷ್ಟು ತೊಂದರೆಯಾಗುತ್ತಿದೆ. ತ್ವರಿತಗತಿಯಲ್ಲಿ ಫ್ಲೈ ಓವರ್ ಕಾಮಗಾರಿಪೂರ್ಣಗೊಳಿಸಿ, ಸುಗಮ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು. ರೈಲುಗಳಸಂಚಾರದ ವೇಳೆ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಅಗತ್ಯಕ್ರಮಕೈಗೊಳ್ಳಬೇಕು ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಆಗ್ರಹಿಸುತ್ತಾರೆ.