ಸಂಘ ಸಂಸ್ಥೆಗಳ ಸಹಕಾರ ಅಗತ್ಯಃ ಹಾಸಿಂಪೀರ

ವಿಜಯಪುರ, ಡಿ.1-ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳೆಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ವಿಜಯಪುರ ಇವರು ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಾಸಿಂಪೀರ ವಾಲೀಕಾರ ಇವರನ್ನು ಕನಕದಾಸ ಬಡಾವಣೆಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಕಛೇರಿಯಲ್ಲಿ ಸನ್ಮಾನ ಪಡೆದುಕೊಂಡು ಮಾತನಾಡಿ ಸಾಹಿತಿಗಳ ಘನತೆ ಗೌರವ ತರುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕೃಷಿ ಮಾಡುವ ಸಂಕಲ್ಪ ನನ್ನದು ಎಂದರು.
ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಅಕ್ಕುಬಾಯಿ ನಾಯಕ ಮಾತನಾಡಿ ಶಿಕ್ಷಕರೆಲ್ಲರು ಸಾಹಿತ್ಯ ಅಭಿರುಚಿ ಮೂಡಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ .ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಪರಿಗಣಿಸಬೇಕು ಎಂದರು
ಎಸ್ ಕೆ ಕವಿಶೆಟ್ಟಿ ಶಕುಂತಲಾ ಹಿರೇಮಠ, ಕೆ.ಸುನಂದಾ ರೇಣುಕಾ ಪೂಜಾರಿ ಮಾತನಾಡಿದರು ಜಯಶ್ರೀ ನಾಯಕ, ರಾಜೇಶ್ವರಿ ಸಜ್ಜನ, ಜಯಶ್ರೀ ಹಿರೇಮಠ, ವಾಣಿ ಪವನ ಕುಲಕರ್ಣಿ, ಭುವನೇಶ್ವರಿ ಹಿರೇಮಠ, ಏಮ್‍ಎನ್‍ಆಲಮೇಲ, ಶೋಭಾ ಭಾಟಿ, ಗೀತಾ ಕುಲಕರ್ಣಿ, ಆರಿಪಾ ಮಿರ್ಜಾ ಉಪಸ್ಥಿತರಿದ್ದರು