ಸಂಘ ಸಂಸ್ಥೆಗಳ ಸತ್ಕಾರ್ಯಗಳು ನಿರಂತರವಾಗಿ ದೊರೆಯಬೇಕು – ಮಾತಾ ಪ್ರಮೋದಾಮಯಿ.


ಸಂಜೆವಾಣಿ ವಾರ್ತೆ
ಹೊಸಪೇಟೆ ಏ10: ಸಮಾಜದಲ್ಲಿ ಸಂಘ ಸಂಸ್ಥೆಗಳು ನಿರಂತರ ಸತ್ಕಾರ್ಯಗಳ ಮೂಲಕ ಜನಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾರದಾಶ್ರಮದ ಮಾತಾ ಪ್ರಮೋದಾಮಯಿ ಅಭಿಮತ ವ್ಯಕ್ತಪಡಿಸಿದರು.
ಹೊಸಪೇಟೆಯ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿದ್ದ ಸಂಸ್ಕಾರ ಶಿಬಿರದ ಸಮಾರೋಪ ಆರ್ಶಿವಚನ ನೀಡಿದ ಅವರು ಮಕ್ಕಳಿಗೆ ನಾವು ಇಂತಹ ಸಂಸ್ಕಾರ ಶಿಬಿರವನ್ನು ಹಮ್ಮಿಕೊಳ್ಳವ ಮೂಲಕ ಉತ್ತಮ ಪರಿಪಾಠಕ್ಕೆ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆಯ ನಾಂದಿಯಾಗಿದೆ, ಪಠ್ಯದ ಹೊರತಾಗಿ ದೊರೆಯುವ ಜ್ಞಾನ ಅವಶ್ಯಕವಾಗಿದ್ದು ಇಂತಹ ಜ್ಞಾನ ನೀಡುವಲ್ಲಿ ಶಿಬಿರ ಸಹಕಾರಿಯಾಗಿದೆ ಎಂದರು.
ಮಹಿಳಾ ಸಮಾಜ ಶಾಲೆಯ ಆಡಳಿತಾಧಿಕಾರಿ ಗುರುರಾಘವೇಂದ್ರಚಾರ್ಯ ಮಾತನಾಡಿ ಮಕ್ಕಳ ಮನೋವಿಕಾಸಕ್ಕೆ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಬಿರ ಸಹಕಾರಿ ಇಂತಹ ಮೌಲಿಕ ವಿಚಾರಗಳು ಮಕ್ಕಳ ಜೊತೆ ಶಿಕ್ಷಕರಿಗೂ ಲಭ್ಯವಾಗುವಂತಾಗಬೇಕು
ಪ್ರಧಾನ ಕಾರ್ಯದರ್ಶಿ ರಮೇಶ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಶಿಬಿರವನ್ನು ನಡೆಸಲು ಸಹಕಾರಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಿಬಿರ ಕುರಿತು ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡರು. ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಖಚಾಂಚಿ ಬಿಷ್ಟೇಶಭಟ್, ತುಕಾರಂ, ಅನಂತಯ್ಯ ಚೌದ್ರಿ, ಸತ್ಯನಾರಾಯಣ, ರಮಾನಂದ, ಅಶೋಕ ಜಿರೆ ಪಾಲ್ಗೊಂಡಿದ್ದರು.