
ದಾವಣಗೆರೆ. ಮಾ.೧೩; ಸಂಘ ಸಂಸ್ಥೆಗಳನ್ನು ಆರಂಭಿಸಲು ಸುಸಜ್ಜಿತಾ ಸಮಿತಿಯ ಅವಶ್ಯಕತೆ ಇರುತ್ತದೆ. ಸಮಿತಿಯ ಯೋಜನೆಯ ಆಧಾರದ ಮೇಲೆ ಸದೃಢ ಸಂಘ ಸಂಸ್ಥೆಗಳನ್ನು ಬೆಳೆಸಲು ಅಜೀವ ಸದಸ್ಯರುಗಳ ಅವಶ್ಯಕತೆ ತುಂಬಾ ಇರುತ್ತದೆ ಎಂದು ಖ್ಯಾತ ವೈದ್ಯ ಮತ್ತು ಭಾರತ ಸೇವಾದಳದ ಅಜೀವ ಸದಸ್ಯರಾದ ಡಾ. ಬಿ. ಎಸ್. ನಾಗಪ್ರಕಾಶರವರು ಅಭಿಪ್ರಾಯ ಪಟ್ಟರು. ಇಂದು ಭಾರತ ಸೇವಾದಳ ಭವನದಲ್ಲಿ ಭಾರತ ಸೇವಾದಳ ಸ್ಥಾಪನ ದಿನಾಚರಣೆಯ ಅಂಗವಾಗಿ ಸೇವಾದಳ ಅಜೀವ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಅಜೀವ ಸದಸ್ಯರ ಮಾಹಿತಿ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿ ಅವರು ಕೆ ಆರ್ ಜಯದೇವಪ್ಪನವರ ಪರಿಶ್ರಮದಿಂದ ದಾವಣಗೆರೆಯಲ್ಲಿ ಸೇವಾದಳ ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿದೆ ಯುವಕರು, ದಾನಿಗಳು ಸೇವಾದಳದ ಅಜೀವ ಸದಸ್ಯತ್ವವನ್ನು ಪಡೆದು ಸಂಸ್ಥೆಯನ್ನು ಮುನ್ನಡೆಸಬೇಕೆಂದು ತಿಳಿಸಿದರು.ಕೇಂದ್ರ ಸಮಿತಿ ಸದಸ್ಯರಾದ ಟಿ. ನಾಗರಾಜುರವರು ಸೇವಾದಳದಿಂದ ಹಮ್ಮಿಕೊಳ್ಳುವ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ವಲಯ ಸಂಘಟಕರಾದ ಎಂ ಅಣ್ಣಪ್ಪನವರು ಸೇವಾದಳ ಇತಿಹಾಸ ಸೇವಾದಳ ನಡೆದುಕೊಂಡು ಬಂದ ಬಗ್ಗೆ ಅಜೀವ ಸದಸ್ಯರುಗಳಿಗೆ ಮಾಹಿತಿ ನೀಡಿದರು. ಹಿರಿಯ ಅಜೀವ ಸದಸ್ಯರಾದ ಪ್ರೊ. ಕೆ ಆರ್ ಸಿದ್ದಪ್ಪನವರು ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಸೇವಾದಳವನ್ನ ಹುಟ್ಟು ಹಾಕಿದ ಬಗ್ಗೆ , ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ ಬಗ್ಗೆ ತಾವು ಡಾ. ನಾ. ಸು. ಹರ್ಡಿಕರ್, ಐ.ಎನ್. ಎ.ರಾಮರಾವ್ ರವರಿಂದ ಪ್ರೇರಣೆಗೊಂಡ ಬಗ್ಗೆ ಮಾಹಿತಿಯನ್ನು ನೀಡಿದರು.ಜಿಲ್ಲಾ ಅಧ್ಯಕ್ಷರಾದ ಪ್ರೊ. ಚನ್ನಪ್ಪ ಎಚ್ ಪಲ್ಲಾಗಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಜೀವ ಸದಸ್ಯರಾದ ಕುಸುಮಾ ಶ್ರೇಷ್ಠಿ, ರಮಣ್ ಲಾಲ್ ಸಾಂಗ್ ವಿ, ತಾಲೂಕು ಅಧ್ಯಕ್ಷರುಗಳಾದ ಎನ್ ಎಸ್ ರಾಜು ಜಗಳೂರು, ಡಿ ಎಚ್. ದಿನೇಶ್ ಕುಮಾರ್ ಚನ್ನಗಿರಿ, ಜಿಲ್ಲಾ ಉಪಾಧ್ಯಕ್ಷರಾದ ಆಲೂರು ವಿಜಯಕುಮಾರ್, ಎಸ್ ಎನ್ ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎ ಆರ್.ಗೋಪಾಲಪ್ಪ ಸ್ವಾಗತಿಸಿದರು, ಎಚ್. ಹನುಮಂತಪ್ಪ ವಂದಿಸಿದರು.