ಸಂಘರ್ಷ ತಪ್ಪಿಸಲು ಮರಾಠ ನಿಗಮ ಸ್ಥಾಪನೆ

ಮಸ್ಕಿ.ನ.೧೯- ಕರ್ನಾಟಕ, ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಂಘರ್ಷ ತಡೆಯಲು ಮರಾಠ ಅಭಿವೃದ್ದಿ ನಿಗಮ ರಚನೆ ಮಾಡಲಾಗಿದೆ ಎಂದು ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು ಬಿಜೆಪಿ ಮುಖಂಡ ವೀರನಗೌಡರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು ಕನ್ನಡಿಗ, ಮರಾಠಿಗರ ನಡುವೆ ಪದೆ ಪದೇ ಸಂಘರ್ಷ ಗಳಾಗುತ್ತಿವೆ ಕರ್ನಾಟಕದ ಮರಾಠಿಗರ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಿದರೆ ತಪ್ಪೇನು ಎಂದರು.
ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಗೆ ಟೀಕಿಸುವರು ಮುಂದಿನ ೧೦ ವರ್ಷ ಗಳ ನಂತರ ಕೊಂಡಾಡಲಿದ್ದಾರೆ ಮರಾಠ ನಿಗಮ ಸ್ಥಾಪನೆಯಲ್ಲಿ ಮುಖ್ಯ ಮಂತ್ರಿಗಳ ಬಹು ದೂರ ದೃಷ್ಟಿ ಯಂದ ಕೂಡಿದೆ ಬೆಳಗಾವಿ ಗಡಿ ಭಾಗದಲ್ಲಿರುವ ಮರಾಠ ಸಮಾಜ ಮುಖ್ಯ ವಾಹಿನಿಗೆ ತರುವ ಉದ್ದೇಶ ವಿದೆ ಎಂದರು.ಮರಾಠ ನಿಗಮ ಆದೇಶ ಬೆನ್ನೆಲ್ಲಿ ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಿಸ ಬೇಕು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಬೇಡಿಕೆ ಇಟ್ಟು ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ ಎಂಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ ಕ್ಯಾತೆ ತೆಗೆಯುವುದು ಮಹಾ ರಾಷ್ಟ್ರ ಮರಾಠಿಗಳ ಹಳೆ ಚಾಳಿ ರಾಜ್ಯದ ಗಡಿಯಲ್ಲಿ ಸಂಘರ್ಷ ತಪ್ಪಿಸುವ ಉದ್ದೇಶ ದಿಂದ ಸಿಎಂ. ಯಡಿಯೂರಪ್ಪ ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದಾರೆ.
ಮರಾಠ ನಿಗಮ ಸ್ಥಾಪನೆ ಮಾಡಿರುವ ಸರಕಾರದ ಕ್ರಮ ಖಂಡಿಸಿ ನಾನಾ ಸಂಘಟನೆಗಳು ಡಿ.೫ ರಂದು ರಾಜ್ಯ ಬಂದ್ ಗೆ ಕರೆ ನೀಡಿರುವ ಬಗ್ಗೆ ಪ್ರತಿ ಕ್ರಿಯೆ ವ್ಯಕ್ತಪಡಿಸಿದ ಸಚಿವರು ಬಂದ್ ಮಾಡುವುದಾದರೆ ಮಾಡಲಿ ಬಿಡಿ ಇವೆಲ್ಲ ಸಹಜ ಎಂದು ಸಚಿವ ಸೋಮಣ್ಣ ಹೇಳಿದರು ಸುರಪೂರ ಶಾಸಕ ರಾಜೂಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಎನ್. ಶಂಕ್ರಪ್ಪ, ವೀರನಗೌಡ ಕಾರ್‍ಲ ಕುಂಟಿ, ಮಲ್ಲಪ್ಪ ಅಂಕುಶ ದೊಡ್ಡಿ ಇದ್ದರು.