ಸಂಘಮಿತ್ರ ಸೇವಾ ಸಂಸ್ಥೆಯಿಂದ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಣೆ

ಅಫಜಲಪುರ:ನ.4: ಅಫಜಲಪುರ ತಾಲೂಕಿನ ಸಂಘಮಿತ್ರ ಗ್ರಾಮೀಣ ಹಣಕಾಸು ಸೇವಾ ಸಂಸ್ಥೆಯಿಂದ ಮಂಗಳವಾರದಂದು ತಾಲೂಕಿನ ಬನ್ನಟ್ಟಿ ಗ್ರಾಮದ ಹಾಗೂ ಗೌರ(ಬಿ)ಗ್ರಾಮದ ಸಂತ್ರಸ್ಥರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದರು.

ಸಂಸ್ಥೆ ವ್ಯವಸ್ಥಾಪಕ ಡಿ.ವಿ.ದೇಶಮುಖ ಮಾತನಾಡಿ ತಾಲೂಕಿನಲ್ಲಿ ಸುರಿದ ಭಾರಿ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ನದಿ ದಂಡೆಯ ಗ್ರಾಮದ ಕುಟುಂಬಗಳ ಜನರು ಬಹಳ ಸಂಕಷ್ಟದಲ್ಲಿದ್ದಾರೆ ಎಂದು ನೋವಿನಿಂದ ನುಡಿದ ಅವರು ಮನೆಗಳಿಗೆ ನೀರು ನುಗ್ಗಿದರಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಯಾಗಿದೆ ಆದ್ದರಿಂದ ಈ ಎರಡು ಗ್ರಾಮಗಳಿಗೆ ನಮ್ಮ ಸಂಸ್ಥೆಯಿಂದ ಆಹಾರ ಕಿಟ್ ನೀಡಿದ್ದೇವೆ ಬರುವ ಇನ್ನು ಕೂಡ ಬೇರೆ ಬೇರೆ ಹಳ್ಳಿಗಳ ಸಂತ್ರಸ್ಥರಿಗೂ ಆಹಾರ ಕಿಟ್ ನೀಡಲಾಗುವುದು ಎಂದರು.

sಸಂಸ್ಥೆಯ ವಲಯ ವ್ಯವಸ್ಥಾಪಕರಾದ ವೀರಣ್ಣಾ ಆರ್.ಎಸ್. ಕ್ಷೇತ್ರ ವ್ಯವಸ್ಥಾಪಕರಾದ ಸೈಬಣ್ಣ ಜಮಾದಾರ, ಗ್ರಾಮದ ಸದಸ್ಯರಾದ ರವೀಂದ್ರ ಜಮಾದಾರ, ಚಂದ್ರಕಾಂತ ನಾವಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಸೇರಿದಂತೆ ಅನೇಕರಿದ್ದರು.