
ಜಗಳೂರು.ಜ.೧೪-ನಗರದ ಪ್ರಮುಖ ರಸ್ತೆಗಳಲ್ಲಿ ಆಯೋದ್ಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣದ’’ನಿಧಿ ಸಮರ್ಪಣಾ ಅಭಿಯಾನ’’ವನ್ನು ಸಂಘಪರಿವಾರದ ಕಾರ್ಯಕರ್ತರು ರಥಯಾತ್ರೆ ಮತ್ತು ಬೈಕ್ ರ್ಯಾಲಿ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚಲನವನ್ನು ನಡೆಸಿದರು.ಬೆಳೆಗ್ಗೆ 11:00 ಗಂಟೆಗೆ ಆರಂಭಗೊಂಡ ರಥಯಾತ್ರೆ ಈಶ್ವರ ದೇವಸ್ಥಾನದಿಂದ ಆರಂಭಗೊಂಡ ವಾಹನವು ಮಹಾತ್ಮ ಗಾಂಧಿ ವೃತ್ತದಿಂದ, ಕೆ.ಇ.ಬಿ. ವೃತ್ತದಿಂದ, ಹಳೆ ಪೋಸ್ಟ್ ಆಫೀಸ್ ರಸ್ತೆ, ವಿದ್ಯಾನಗರ, ಸಿಂಡಿಕೇಟ್ ಬ್ಯಾಂಕ್, ಮರೆನಹಳ್ಳಿರಸ್ತೆ, ನಂತರ ಈಶ್ವರ ದೇವಸ್ಥಾನಕ್ಕೆ ಕೊನೆ ಮಾಡಲಾಯಿತ್ತು. ಶ್ರೀ ರಾಮನ ಭಾವಚಿತ್ರಕ್ಕೆ ಹೂವಿನ ಹಾಕಿ ಅಲಂಕಾರ ಮಾಡಿ ತೆರೆದ ವಾಹನದಲ್ಲಿ ಮೆರವಣೆಗೆ ಸಾಗಿತ್ತು.ನಂತರ ನಡೆದ ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ತಾಲ್ಲೂಕು ಕಾರ್ಯವಾಹರಾದ ಅರುಣ್ ಕುಮಾರ್ ಜಿ.ಸಿ, ಮಾತನಾಡಿ ಈ ಕಾರ್ಯದಲ್ಲಿ ಬಡವ,ಶ್ರೀಮಂತ ಯಾವುದೇ ಜಾತಿ ಧರ್ಮವಿಲ್ಲದೆ ಯಾವುದೇ ಪಕ್ಷ ಭೇದವಿಲ್ಲದೆ ಎಲ್ಲರೂ ಭಾಗಿಯಾಗಿ ತಮ್ಮ ಕೆಲಸಗಳನ್ನು ಮಾಡಬೇಕು.ಮತ್ತು ಕನಿಷ್ಠ 10 ರೂ ಗಳಿಂದ ಅವರ ಭಕ್ತಿಗೆ ಅನುಸಾರವಾಗಿ ನಿಧಿ ಸಮರ್ಪಣೆಯನ್ನು ಮಾಡಬಹುದು.ಹಾಗೂ ನಾವೆಲ್ಲರೂ ಜೊತೆಗೂಡಿ ಶ್ರೀ ರಾಮನ ಭವ್ಯ ಮಂದಿರದ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಬಿ.ಜೆ.ಪಿ.ಯ ತಾಲ್ಲೂಕ್ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ಮಾತನಾಡಿ ಶ್ರೀ ರಾಮನ ಇತಿಹಾಸ ಇರುವುದು ಎಲ್ಲರಿಗೂ ಗೊತ್ತಿರಲಿಲ್ಲ.ಆದರೆ ಹಲವು ವರ್ಷಗಳಿಂದ ಇತ್ಯರ್ಥವಾಗದ ಈ ಕೇಸ್ ಕಳೆದ ವರ್ಷ ಇತ್ಯರ್ಥವಾಗಿದೆ.ಆಗಾಗಿ ಸುಮಾರು ಎರಡು ತಿಂಗಳಿನಿಂದ ಶ್ರೀ ರಾಮನ ಮಂದಿರಕ್ಕೆ ನಿಧಿ ಅಭಿಯಾನಕ್ಕೆ ಎಲ್ಲರೂ ಸೇರಿ ಮಂಡಲ ಗ್ರಾಮಗಳಲ್ಲಿ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದೇವೆ.ಮತ್ತು ಈ ಅಭಿಯಾನಕ್ಕೆ ಸಂಪೂರ್ಣವಾಗಿ ನಾವುಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರಾದ ಜಿಲ್ಲಾ ಬೌದ್ಧಿಕ್ ಪ್ರಮುಖ ದೇವಿಕೆರೆ ಶ್ರೀ ನಿವಾಸ್, ಮುರುಗೇಶ್, ಕೆ.ಎಂ ಜಗದೀಶ್. ಎಲ್ಲಾ ಪಕ್ಷದ ಪ್ರಮುಖರಾದ ದೇವಿಕೆರೆ ಶಿವುಕುಮಾರ್ ಸ್ವಾಮಿ, ಡಿವಿ ನಾಗಪ್ಪ, ಜೆವಿ ನಾಗರಾಜ್, ರುದ್ರಣ್ಣ, ಪ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಪ.ಪಂ ಉಪಾಧ್ಯಕ್ಷರಾದ ಗೌರಿಪುರ ಶಿವಣ್ಣ, ಪ.ಪಂ ಸದಸ್ಯರಂದ ನವೀನ್ ಕುಮಾರ್, ಪಾಪಲಿಂಗಪ್ಪ, ಮತ್ತು ಸಂಘಪರಿವಾರದ ಕಾರ್ಯಕರ್ತರಾದ ಪವನ್, ಯೋಗೇಶ್, ಸೂರ್ಯಕಿರಣ್, ಸಂದೀಪ್, ಪ್ರಶಾಂತ್, ಮಧು, ಪ್ರಕಾಶ್, ರೇವಣಸಿದ್ದಯ್ಯ, ತಿಪ್ಪೇಶ್ ಹಾಜರಿದ್ದರು.