ಸಂಘದ ಸದಸ್ಯತ್ವ ಪಡೆಯದ ಹೆಚ್ಚಿನ ರೈತರು: ನರೇಂದ್ರ ವಿಷಾದ

ಹನೂರು:ಮಾ:31: ರೈತರು ನಿಗಧಿತ ಅವಧಿಯೊಳಗೆ ಸಾಲ ಮರು ಪಾವತಿಯನ್ನು ಮಾಡುವುದರ ಜೊತೆಗೆ ಮುಂದಿನ ದಿನಗಳ ಸಂಘದ ಬೆಳವಣಿಗೆಗೆ ಸಹಕರಿಸಿ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದ ಅಜ್ಜೀಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಲಾಗಿದ್ದ ಹನೂರು ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ಕೆ.ಸಿ.ಸಿ ಬೆಳೆ ಸಾಲದಸಹಾಯ ಧನ ಚೆಕ್ ವಿತರಣೆಯನ್ನು ಮಾಡಿ ನಂತರ ಅವರು ಮಾತನಾಡಿದರು.
ಅಜ್ಜೀಪುರ ಕೃಷಿ ಪತ್ತಿನ ಸಹಕಾರ ಸಂಘ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಇದ್ದರೂ ಸಹ ಸದಸ್ಯತ್ವವನ್ನು ಪಡೆದಿಲ್ಲ ಎಂದು ವಿಷಾದಿ ಸಿದರು. ಇದರಿಂದ ಸಂಘಕ್ಕೆ ಹೆಚ್ಚಿನ ಸಾಲ ಸೌಲಭ್ಯಗಳು ಸಿಗುತ್ತಿಲ್ಲ.
ಈ ಹಿನ್ನಲೆಯಲ್ಲಿ ಹೆಚ್ಚಿನ ಸದಸ್ಯತ್ವವನ್ನು ಪಡೆದು ಷೇರುದಾ ರರಾಗಿ ಎಂದು ಸಲಹೆ ನೀಡಿದ ಅವರು ರೈತರ ಕೆಲವೊಂದು ಸಮಸ್ಯೆಗಳ ಬಗ್ಗೆ ಆಲಿಸಿ ಉತ್ತರಿಸಿ, ಇನ್ನೂ ಮೂರು ನಾಲ್ಕು ತಿಂಗಳುಗಳ ಒಳಗಡೆ ನದಿ ಮೂಲದಿಂದ ಜಲಾಶಯಗಳಿಗೆ ನೀರನ್ನು ತುಂಬಿಸಲಾಗುವುದು.
ಈಗಾಗಲೇ ಮೂರು ಜಲಾಶಗಳಿಗೆ ನೀರನ್ನು ಒದಗಿಸಲು ಶ್ರಮಿಸಲಾಗಿದ್ದು, ಇನ್ನೂಳಿದ ಜಲಾಶಯಗಳಾದ ಉಡುತೊರೆ ಜಲಾಶಯ, ಕೀರೆಪಾತಿ ಡ್ಯಾಂ, ಗೋಪಿನಾಥಂ ಡ್ಯಾಂಗೆ ನೀರನ್ನು ಒದಗಿಸುವ ದಿಸೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಎಲ್ಲಾ ಮಹತ್ವದ ಯೋಜನೆಗಳು ಸಾಕಾರಗೊಂಡರ ಬಹುತೇಕ ನೀರಿನ ಸೌಕರ್ಯ ದೊರಕಿದಂತೆ ಆಗುತ್ತದೆ.
ಹುಬ್ಬೆ ಹುಣಸೆ ಜಲಾಶಯದಿಂದ ಉಡುತೊ ರೆ ಜಲಾಶಯಕ್ಕೆ ನೀರನ್ನು ಒದಗಿಸಿದರೆ ಇಲ್ಲಿನ 15 ಸಾವಿರ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ.
ನೀರಾವರಿ ಕಛೇರಿಯನ್ನು ಕಾಮಗೆರೆಯಿಂದ ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಇದೇ ವೇಳೆ ಅರ್ಹ ಫಲಾನುಭವಿ ಸಂಘದ ರೈತರಿಗೆ ಸಾಲ ಸಹಾಯ ಧನ ಚೆಕ್‍ನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಬಸವ ರಾಜು, ಅಜ್ಜೀಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಕಾರ್ಯದರ್ಶಿ, ಹನೂರು ಎಂಸಿಡಿಸಿಸಿ ಬ್ಯಾಂಕ್ ಮ್ಯಾನೇಜರ್‍ಸೇರಿದಂತೆ ಇನ್ನಿತರರಿದ್ದರು.