ಸಂಘದ ಬೆಳವಣಿಗೆ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಶ್ರಮಿಸಿ- ಎಸ್.ವಿ. ಸಂಕನೂರ

ಧಾರವಾಡ, ಏ6: ಹೊಸದಾಗಿ ಆಯ್ಕೆಯಾದ ಸಂಘದ ಪದಾಧಿಕಾರಿಗಳು ಸಂಘದ ಸದಸ್ಯತ್ವವನ್ನು ಹೆಚ್ಚಿಸುವ ಮೂಲಕ ಸಂಘಟನ ಶಕ್ತಿಯನ್ನು ಬೆಳೆಸಬೇಕು ಎಂದು ವಿಧಾನ ಪರಿಷತ್ತ ಸದಸ್ಯರಾದ ಮತ್ತು ಸಂಘದ ಗೌರವಾಧ್ಯಕ್ಷರಾದ ಎಸ್.ವ್ಹಿ.ಸಂಕನೂರ ಕರೆನಿಡಿದರು.
ಅವರು ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ರಾಜ್ಯ ಕಾರ್ಯಾಕಾರಿ ಮಂಡಳಿ ಸಭೆಯನ್ನು ಸಕ್ರ್ಯೂಟ್ ಹೌಸ್ ಹುಬ್ಬಳ್ಳಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇತ್ತೀಚಿನ ಒಂದು ಬೆಳವಣಿಗೆಯನ್ನು ಗಮನಿಸಿದಾಗ ಹೊಸ ಸದಸ್ಯರ ಸಂಖ್ಯೆ ತುಂಭಾ ವಿರಳವಾಗಿದೆ. ಅಲ್ಲದೆ ಸಂಘವು ಬಲಿಷ್ಠವಾದರೆ ಎಲ್ಲ ಹಂತದ ಅಭಿವೃದ್ದಿಯನ್ನು ಮತ್ತು ಬೇಡಿಕೆಗಳನ್ನು ಈಡೆರಿಸಿಕೊಳ್ಳಲು ಸಹಾಯಕವಾಗುತ್ತದೆ. ಪದವಿ ಪೂರ್ವ ಮಹಾವಿದ್ಯಾಲಯಗಳ ಬೋಧಕ ಬೋಧಕೇತರ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅದಕ್ಕೆ ಸಂಬಂಧಿಸಿದಂತಹÀ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಮಾಡಬೇಕಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯರಾದ ಮೋಹನ ಸಿದ್ದಾಂತಿಯವರು ಮಾತನಾಡಿ ಸಂಘದ ನಡೆದು ಬಂದ ಸಂಧರ್ಭಗಳನ್ನು ಹಾಗೂ ಸಂಘಬೆಳೆಸಲು ಶ್ರಮಿಸಿದ ಹಾದಿಯನ್ನು ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ 2021-24 ರವರೆಗಿನ ರಾಜ್ಯಮಟ್ಟದ ಪದಾಧಿಕಾರಿಗಳನ್ನು ಅವಿರೋಧವಾಗಿ ಎಸ್.ವ್ಹಿ.ಸಂಕನೂರು ಇವರ ನೇತೃತ್ವದಲ್ಲಿ ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಬಾಗಲಕೋಟೆಯ ಟಿ.ಎಮ್.ಗಂಗೂರ, ಕಾರ್ಯಾದ್ಯಕ್ಷರಾಗಿ ಉತ್ತರಕನ್ನಡದ ಜಿ.ಪಿ.ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ದಾರವಾಡದ ಎಸ್.ಎಲ್.ಶೇಖರಗೋಳ, ಖಜಾಂಚಿಯಾಗಿ ಡಾ.ಬಿ.ಆರ್ ರಾಠೋಡ, ಉಪಾಧ್ಯಕ್ಷರಾಗಿ ಜಿ.ಬಿ.ನಾಯಕ ಮತ್ತು ಸಂಧೀಶ ಕಾಖಂಡಕಿ, ಕೆ.ಪಿ ಬ್ಯಾಡಗಿ,ಶಿವಪ್ಪ ಜಿ.ಇ, ಕಾರ್ಯದರ್ಶಿಗಳಾಗಿ ಜಿ.ಎಮ್.ಹಕಾರಿ, ಎಮ್.ಟಿ.ನಾಯಕ, ಎಮ್.ಡಿ.ಮನ್ನಿಕೇರಿ, ಸಹಕಾರ್ಯದರ್ಶಿಗಳಾಗಿ ಡಾ.ವಾಯ್.ಆರ್‍ಬೆಲೇರಿ, ಮಾಚೇನಹಳ್ಳಿ, ಮಂಜುನಾಥ ಶೆಟ್ಟಿ, ಚಂದ್ರಶೇಖರ ವಾಸನದ, ಟಿ.ಎಮ್.ಕುಮಾರ,ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಎಸ್.ಎಸ್.ಮಳಲಿ, ಎಫ್. ಆರ್. ಹಳೆರಿತ್ತಿ, ವಸಂತರಾಯ ಗಾಂವಕರ, ಬಿ.ಎಸ್.ಮಲ್ಲಾಪೂರ, ಡಾ.ಸುಜಾತ ನಲವಡಿ, ಆರ್.ಟಿ.ನಾಯಕ, ಎಸ್.ಎಮ್.ಮರಲಿಂಗಣ್ಣವರ, ಡಾ.ಉಮೇಶ ತಿಮ್ಮಾಪೂರ, ಉದಯಸಿಂಗ್ ಹಜೇರಿ, ಅನ್ನಪೂರ್ಣ ಬಿಡ್ಡಣ್ಣನವರ ಆಯ್ಕೆಯಾಗಿದ್ದಾರೆ.
ಈ ಸಭೆಯಲ್ಲಿ ಪೆÇ್ರೀ ಎಚ್.ಬಿ.ಲಿಂಗಯ್ಯ, ಹಿರಿಯರಾದ ಸಂದೀಪ ಬೂದಿಹಾಳ, ಜೆ.ಎ.ಜಂಗೀರದಾರ, ಡಾ.ಸುರೇಶ ಮಾಳೆ, ಡಾ.ಪ್ರಲ್ಹಾದ ಯಾವಗಲ್, ರಾಮಪ್ಪ ದಾಸ್ತಿಕೊಪ್ಪ, ಸಯ್ಯದ ಅಹಮದ್, ಪಿ.ಆರ್.ಪಾಟೀಲ, ಅಸೋಕ ಅಂಗಡಿ, ಲೋಹಿತ್,ಸಜ್ಜನ, ಜಯರಾಮ ಲಮಾಣಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಹಾಗೂ ಉಪನ್ಯಾಸಕರು ಮುಂತಾದವರು ಹಾಜರಿದ್ದರು.