ಸಂಘದ ಅಭಿವೃದ್ದಿಗೆ ಸಂಪನ್ಮೂಲ ಕ್ರೋಡೀಕರಣ ಅಗತ್ಯ

ಹೊಸಕೋಟೆ.ಏ೧೧:ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗಳು ಸಹಕಾರ ಸಂಘದ ಪರಿಮಿತಿಯಲ್ಲಿ ಕೆಲಸ ಮಾಡಲಿದ್ದು, ಸಂಘದ ಅಭಿವೃದ್ದಿಗೆ ಸಂಪನ್ಮೂಲ ಕ್ರೋಡಿಕರಣ ಅತ್ಯಗತ್ಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಬುರೆಡ್ಡಿ ತಿಳಿಸಿದರು.
ತಾಲೂಕಿನ ಭೋದನಹೊಸಹಳ್ಳಿ ಗ್ರಾಮದ ಸ್ನೇಹ ಪರಿಶಿಷ್ಟ ಜಾತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಅವಿರೋಧವಾಗಿ ಆಯ್ಕೆಯಾದ ಪಧಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದರು.ಸಹಕಾರ ಸಂಘಗಳು ಸಂಕಷ್ಟದಲ್ಲಿದ್ದ ಸಮಯದಲ್ಲಿ ವೈದ್ಯನಾಥನ್ ಕಮಿಟಿ ಅನುಷ್ಠಾನ ಮಾಡಲಾಯಿತು. ಈ ವೇಳೆ ನಷ್ಟದಲ್ಲಿದ್ದ ಸಂಘಗಳಿಗೆ ಸರ್ಕಾರ ಆರ್ಥಿಕವಾಗಿ ಮತ್ತಷ್ಟು ಬಲ ತುಂಬುವ ಕೆಲಸ ಮಾಡಿದವು. ಆದರೆ ಈಗಲೂ ಸಹಕಾರ ಸಂಘಗಳು ಅಭಿವೃದ್ದಿಯತ್ತ ಸಾಗಲು ಠೇವಣಿ ಸಂಗ್ರಹ, ಉಳಿತಾಯ ಖಾತೆ, ಸಾಲ ವಿತರಣೆ ಹಾಗೂ ಸಮರ್ಪಕ ವಸೂಲಾತಿಯಿಂದ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘದ ಪಧಾಧಿಕಾರಿಗಳು ಆಸಕ್ತಿವಹಿಸಿ ಕೆಲಸ ಮಾಡಬೇಕು ಎಂದರು.ಸ್ನೇಹ ಪರಿಶಿಷ್ಟ ಜಾತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಲಘುಮಯ್ಯ ಮಾತನಾಡಿ ಬಡ ಮಧ್ಯಮ ವರ್ಗದವರಿಗೆ ಸೊಸೈಟಿ ಮೂಲಕ ಕಿರು ಆರ್ಥಿಕ ಸಾಲ ಸೌಲಭ್ಯ ಒದಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಸೇವಾ ಮನೋಭಾವದ ದೃಷ್ಟಿಯಿಂದ ಕೆಲಸ ಮಾಡಲಾಗುತ್ತದೆ. ಸಂಘದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ನೌಕರರಿದ್ದು, ಪಕ್ಷಭೇದ ಮರೆತು ಎಲ್ಲರ ಪರಸ್ಪರ ಸಹಕಾರ ನೀಡುವಂತಾಗಬೇಕು ಎಂದರು.ವಿಎಸ್‌ಎಸ್‌ಎನ್ ಉಪಾಧ್ಯಕ್ಷ ವೆಂಕಟರಮಣಪ್ಪ, ಗ್ರಾಪಂ ಅಧ್ಯಕ್ಷೆ ಮಂಜುಳಾ ಆನಂದಾಚಾರಿ, ಸಿಇಓ ನಾರಾಯಣಗೌಡ, ಚುನಾವಣಾಧಿಕಾರಿ ನಾಗರಾಜ್, ಸಂಘದ ಉಪಾಧ್ಯಕ್ಷ ಜಯರಾಮ್, ನಿರ್ದೇಶಕರಾದ ಮುನಿಕೃಷ್ಣಪ್ಪ, ಎಂ.ನಾರಾಯಣ, ವೇಣುಗೋಪಾಲ್, ಸುನಿತಾ, ನಾಗರಾಜ್, ಶಂಕರ್ ಮೂರ್ತಿ, ಮುನಿರಾಜಪ್ಪ, ಗೋಪಾಲಕೃಷ್ಣ, ರವಿಚಂದ್ರ, ನಾಗರಜ್, ಇಂದ್ರಜಾ, ಬ್ಯಾಟರಾಜ್, ಸುರೇಶ್‌ರಾಜ್ ಇದ್ದರು.

ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಲಘುಮಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಜಯರಾಮ್ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ದವಾಗಿ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ಸಂಘದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ ಅಭಿವೃದ್ದಿ ದೃಷ್ಠಿಯಿಂದ ಎಲ್ಲರೂ ಕಾರ್ಯನಿರ್ವಹಿಸಿ.
ನಾಗರಾಜ್ – ಚುನಾವಣಾಧಿಕಾರಿ