ಚಿತ್ರದುರ್ಗ.ಜೂ.೧೭; ಜಿಲ್ಲೆಯ ವಿವಿಧ ಕೃಷಿ ಯೋಜನೆಗಳ ಅನುμÁ್ಠನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ ಹಾಗೂ ಸಂಘಟಿತ ಪರಿಶ್ರಮದಿಂದ ಚಿತ್ರದುರ್ಗ ಕೃಷಿ ಇಲಾಖೆಗೆ ಪ್ರಥಮ ಸ್ಥಾನ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಹೇಳಿದರು.ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಶೇಂಗಾ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಇದರ ಜೊತೆಗೆ ಪರ್ಯಾಯ ಬೆಳೆಗಳಾದ ಸೂರ್ಯಕಾಂತಿ ಮತ್ತು ಸೋಯಾಬೀನ್‍ನ್ನು ಬೆಳೆಯುವಂತೆ ಹೇಳಿದರು. ಈಗಾಗಲೇ ಮುಂಗಾರು ಬಿತ್ತನೆಗೆ ಬೀಜ ಮತ್ತು ರಸಗೊಬ್ಬರವನ್ನು ವಿತರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದರು.ಜಿಲ್ಲೆಯಲ್ಲಿ ಅವಶ್ಯವಿರುವ ಬೀಜ ಮತ್ತು ರಸಗೊಬ್ಬರ ದಾಸ್ತಾನುಕರಿಸಿದ್ದು, ರೈತರಿಗೆ ಬಿತ್ತನೆ ಮಾಡಲು ಯಾವುದೇ ಕೊರತೆ ಇಲ್ಲ. ಪೂರ್ವ ಮುಂಗಾರಿನಲ್ಲಿ ಸಾಮೆ, ಹತ್ತಿ, ಹೆಸರು ಬಿತ್ತನೆಯಾಗಿದೆ. ಮತ್ತು ನ್ಯಾನೋ ಯೂರಿಯಾದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಜಿಲ್ಲೆಗೆ 92000 ಬಾಟಲ್ ಮಂಜೂರಾಗಿರುತ್ತದೆ. ಅಧಿಕಾರಿಗಳು ರೈತರಿಗೆ ಇದರ ಉಪಯೋಗದ ಮನವರಿಕೆ ಮಾಡಿಕೊಡಬೇಕು. ಈ ಗೊಬ್ಬರದಿಂದ ಪರಿಸರಕ್ಕೆ ಹಾನಿ ಕಡಿಮೆ. ಹಿಂದಿನ ವರ್ಷ ಕದಿರಿ ಲೇಪಾಕ್ಷಿ ಶೇಂಗಾ 500 ಕ್ವಿಂಟಲ್ ರೈತರಿಗೆ ವಿತರಿಸಲಾಯಿತು. ಆದರೆ ರೈತರು ಬೆಳೆಯಲು ಆಸಕ್ತಿ ತೋರಿಸುತ್ತಿಲ್ಲ. ಏಕೆಂದರೆ ಕಡಿಮೆ ರುಚಿ ಇರುವ ಕಾರಣ. ಈ ವರ್ಷ ಡಿ.ಹೆಚ್-256 ತಳಿಯನ್ನು ಜಿಲ್ಲೆಗೆ 500 ಕ್ವಿಂಟಲ್ ವಿತರಿಸಲು ಯೋಚಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.