ಸಂಘಟನೆ ಸಮಾಜಮುಖಿ ಕೆಲಸ ಮಾಡಿ – ಶೇಖರಪ್ಪ ಗಿಣಿವರ

ಸಿಂಧನೂರು.ಜ.೬- ಸಂಘಟನೆಗಳು ಸಮಾಜದಲ್ಲಿರುವ ತುಳಿತಕ್ಕೆ ಒಳಗಾದ ಜನರ ಪರವಾಗಿ ಸಮಾಜಮುಖಿ ಕೆಲಸ ಮಾಡಬೇಕು ವಿನಹ ತಮ್ಮ ಸ್ವಾರ್ಥ ಸಾಧನೆಗಾಗಿ ಅಲ್ಲ ಎಂದು ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ ಹೇಳಿದರು
ನಗರದ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮಕ್ಕಳ ಆಶ್ರಮದಲ್ಲಿ ತಮ್ಮ ೫೦ನೇ ವರ್ಷದ ಹುಟ್ಟುಹಬ್ಬವನ್ನು ಮಕ್ಕಳಿಗೆ ಅಂತ ಸಂತರ್ಪಣೆ ಮಾಡುವ ಮೂಲಕ ವಿನೂತನವಾಗಿ ಆಚರಿಸಿಕೊಂಡರು
ಸಮಾಜದಲ್ಲಿರುವ ಸಂಘಟನೆಗಳು ನೊಂದು ಬೆಂದವರ ಹಾಗೂ ತಿಳಿತಕ್ಕೆ ಒಳಗಾದ ದೀನ ದಲಿತರ ನೋವು ನಲಿವುಗಳಿಗೆ ಸ್ಪಂದಿಸಿ ಜನಪರವಾಗಿ ಕೆಲಸ ಮಾಡಬೇಕು ಅದು ಬಿಟ್ಟು ಸ್ವಾರ್ಥ ಸಾಧನೆಗಾಗಿ ಕೆಲಸ ಮಾಡುವ ಸಂಘಟನೆಗಳು ಜನರಿಂದ ದೂರವಾಗುತ್ತಿವೆ ಎಂದರು
ನಾನು ಹಿಂದೆ ಸಂಘಟನೆ ಮಾಡಿ ಜನಪರ ಕೆಲಸದಿಂದ ರಾಜಕೀಯವಾಗಿ ಬೆಳೆದು ಬಂದಿರುವೆ ಸಮಾಜದ ಮುಖಂಡರುಗಳು ಆಸ್ತಿ ಮಾಡದೇ ಮಕ್ಕಳಿಗೆ ಶಿಕ್ಷಣ ಕೊಡಿಸಿ ಮಕ್ಕಳ್ಳನ್ನು ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು ಅಲ್ಲದೆ ಸರ್ಕಾರದ ಸೌಲಭ್ಯ ವನ್ನು ಸಮಾಜದ ಜನರಿಗೆ ಕೊಡಿಸಿ ಇತರ ಸಮಾಜಗಳಂತೆ ನಮ್ಮ ಸಮಾಜವು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದರು
ನಾನು ಮಾಜಿ ಶಾಸಕ ಹಂಪನಗೌಡರ ಆಶೀರ್ವಾದದಿಂದ ರಾಜಕೀಯವಾಗಿ ಬೆಳೆದಿದ್ದು ನನಗೆ ಹಂಪನಗೌಡ ಬಾದರ್ಲಿ ರಾಜಕೀಯ ಗುರುವಾಗಿದ್ದು ನಾನು ನಿರಂತರವಾಗಿ ನನ್ನ ಕೈಲಾದ ಮಟ್ಟಿಗೆ ನಮ್ಮ ಸಮಾಜ ಸೇರಿದಂತೆ ಇತರ ಸಮಾಜದವರಿಗೂ ಸಹಾಯ ಮಾಡಿದ್ದೇನೆ ಇನ್ನೂ ಮುಂದೆಯೂ ಸಹ ಮಾಡುತ್ತೇನೆ ಸಮಾಜದ ಮುಖಂಡರ ಆಶೀರ್ವಾದ ನನ್ನ ಮೇಲೆ ಇರಲಿ ಎಂದರು
ಸಮಾಜದ ಮುಖಂಡರಾದ ಬಿ. ತಿಕ್ಕಯ್ಯ ಬಳಗಾನೂರ, ಹೊಳೆಯಪ್ಪ ದಿದ್ದಿಗಿ, ಬಸವರಾಜ ಬಡಿಗೇರ್, ಭೀಮೇಶ್ ಕವಿತಾಳ, ಮೌನೇಶ್, ನಾಗರಾಜ್ ಕವಿತಾಳ, ಹುಸೇನಪ್ಪ, ದೇವರಾಜ್, ಶರಣಪ್ಪ, ನಾಗಪ್ಪ, ಯಮನೂರಪ್ಪ ಸೇರಿದಂತೆ ಇತರರು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹಾಜರಿದ್ದರು