ಸಂಘಟನೆ ಗಟ್ಟಿಗೊಂಡಷ್ಟು ಸಮಾಜದ ಬೆಳವಣಿಗೆ


ಬಾಗಲಕೋಟೆ,ನ.4: ಸಮಾಜ ಸಂಘಟನೆಯಾಗಬೇಕು. ಸಮಾಜ ಸೇವೆ ಮಾಡುವವರಿಗೆ ಪೆÇ್ರೀತ್ಸಾಹ ನೀಡಬೇಕು. ಆದರೆ ಅವರನ್ನು ಹಿಂದೆ ಜಗ್ಗುವ ಕೆಲಸ ಮಾಡಬಾರದು. ಸಮಾಜ ಬೆಳೆದರೆ ವ್ಯಕ್ತಿ ಬೆಳೆಯುತ್ತಾನೆ. ಸಮಾಜ ಎಷ್ಟು ಪ್ರಬಲವಾಗುತ್ತದೆ ಅಷ್ಟು ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ನೀಲಕಂಠೇಶ್ವರ ವೀರಭೀಕ್ಷಾವರ್ತಿ ಮಠದ ಪೀಠಾಧಿಪತಿ ಶ್ರಿ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ನವನಗರದ ಶ್ರೀ ನೀಲಕಂಠೇಶ್ವರ ಸಾಂಸ್ಕøತಿಕ ಭವನದಲ್ಲಿ ನಡೆದ ಬಾಗಲಕೋಟ ಜಿಲ್ಲಾ ಕುರುಹಿನಶೆಟ್ಟಿ ನೇಕಾರ ಸಮಾಜ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸೇವಾ ದೀಕ್ಷಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು. ನಿತ್ಯದ ಕೆಲಸದ ಜೊತೆಗೆ ಸಮಾಜಕ್ಕೂ ಸಮಯ ಮೀಸಲಿಡಬೇಕು ಎಂದು ಹೇಳಿದರು.
ಜಿಲ್ಲಾ ಕುರುಹಿನಶೆಟ್ಟಿ ನೇಕಾರ ಸಮಾಜ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಣ್ಣ ಹಲಕಾಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಕುರುಹಿನಶೆಟ್ಟಿ ಸಮಾಜ ಬಾಂಧವರನ್ನು ಒಗ್ಗೂಡಿಸಲು ಸರಿಯಾದ ಸಂಘಟನೆ ಇರಲಿಲ್ಲ. ಆದರೆ ಈಗ ಜಿಲ್ಲೆಯ ಸಮಾಜದ ಎಲ್ಲರೂ ಕೂಡಿ ಶ್ರೀಗಳ ನೇತೃತ್ವದಲ್ಲಿ ಸಮಾಜ ಸಂಘಟನೆಗೆ ಸಂಘ ರಚನೆ ಮಾಡಿದ್ದು ಎಲ್ಲರ ಸಹಾಯ ಸಹಕಾರ ಅವಶ್ಯವಾಗಿಬೇಕು ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್, ವ್ಯವಸ್ಥಾಪನ ಮಂಡಳಿ ಸದಸ್ಯ ಡಾ.ಚಿದಾನಂದ ಮನ್ಸೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಹಿರಿಯ ವೈದ್ಯ ಡಾ.ಬಿ.ಎಸ್.ಮರೇಗುದ್ದಿ ಅವರು ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಈರಣ್ಣ ಎಸ್.ಯಂಡಿಗೇರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಮುರಿಗೆಪ್ಪ ಬನ್ನಿ, ಎಂ.ಪಿ.ಶಿವಕುಮಾರ, ಮಲ್ಲಿಕಾರ್ಜುನ ಹಂಡಿ ಡಾ.ಎಂ.ಎಸ್.ದಡ್ಡೆನ್ನವರ, ಅಮರೇಶ ಕೊಳ್ಳಿ, ಮಲ್ಲಿಕಾರ್ಜುನ ರೋಣದ, ಶ್ರೀನಿವಾಸ ಬಳ್ಳಾರಿ, ಮುಖಂಡ ಮನೋಹರ ಶಿರೋಳ, ಸುದರ್ಶನ ಸುನಧೂಳಿ, ಉಮಾಶಂಕರ ಅರಬಿ, ಎಸ್.ಕೆ.ಹತ್ತರಕಿಹಾಳ ಸೇರಿದಂತೆ ವಿಜಯಪುರ, ಯಾದಗಿರಿ, ಧಾರವಾಡದ,ಬೆಳಗಾವಿ ಜಿಲ್ಲಾ ಮುಖಂಡರು, ಜಿಲ್ಲಾ ಬಾಗಲಕೋಟೆ, ಗುಳೇದಗುಡ್ಡ, ಅಮೀನಗಡ, ಕೊಂಕಣಕೊಪ್ಪ, ಮಹಾಲಿಂಗಪೂರ, ತೇರದಾಳ, ರಬಕವಿ ಬನಹಟ್ಟಿ ಸೇರಿದಂತೆ ಜಿಲ್ಲೆಯ ಅನೇಕ ನಗರಗಳಿಂದ ಕುರುಹಿನಶೆಟ್ಟಿ ಸಮಾಜ ಬಾಂದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.