ಸಂಘಟನೆಯಿಂದ ಹಿಂದೆ ಸರಿಯಲ್ಲ-ನಾಗರಾಜ್

ದೇವನಹಳ್ಳಿ,ಜ೮-ಶೋಷಿತರು, ದಲಿತರು ನೊಂದ ಮಹಿಳೆಯರು ಹಾಗೂ ಅಸಾಯಕ ಬಡವರ್ಗದ ರೈತರ ಪಾಲಿನ ಧ್ವನಿಯಾಗಿ ಹೋರಾಟ ಮಾಡಿ ಭ್ರಷ್ಟ ಭುಗಳ್ಳರ ಪರವಾದ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಕೆಲಸ ಮಾಡಿ ದೊಡ್ಡಮಟ್ಟದ ಚಳುವಳಿಗಳ ಮೂಲಕ ಯಶಸ್ಸು ಕಂಡ ಪ್ರಜಾವಿಮೊಚನ ಬಹುಜನ ಸಮಿತಿ ಸಂಘಟನೆಯಿಂದ ನಾನು ಎಂದಿಗೂ ಹಿಂದೆ ಸರಿಯಲಾರೆ,ಹೋರಾಟವೇ ನನ್ನ ಉಸಿರು ಎಂದು ಪಿ.ವಿ.ಬಿ.ಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿಜ್ಜವಾರ ನಾಗರಾಜ್ ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನೆಯ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದ ನಾಗರಾಜ್ ಮಾತನಾಡಿ ನಾವು ಡಾ. ಬಿ.ಆರ್.ಅಂಬೇಡ್ಕರ್ರವರ ತತ್ವ ಸಿದ್ದಾಮತಗಳನ್ನು ಅನುಸರಿಸುತ್ತಾ ಶೋಷಿತರ ಪರವಾಗಿ ಹೊರಾಟಗಳನ್ನು ರೂಪಿಸಿ ರಾಜ್ಯಮಟ್ಟದಲ್ಲಿ ನಮ್ಮ ಸಂಘಟನೆಯನ್ನು ಎಲ್ಲರ ಸಹಕಾರದಿಂದ ಬೆಳೆಸಿದ್ದೆವೆ ಅಂಬೇಡ್ಕರ್ರವರ ಸಂವಿಧಾನದ ಆಶಯದಂತೆ ನಾನು ಬಿಜ್ಜವಾರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಿ ಅತಿ ಹೆಚ್ಚುಮತಗಳಿಂದ ಗೆದ್ದಿದ್ದೆನೆ ಸ್ಪರ್ಧಾ ಕಣದಿಂದ ಹಿಂದೆ ಸರಿಯುವಂತೆ ಬಹಳಷ್ಟು ಒತ್ತಡಗಳು ಬಂದಿತ್ತು ನಾನು ಯಾವುದಕ್ಕೂ ಜಗ್ಗಲಿಲ್ಲ ಜನ ನನ್ನ ಕೈಬಿಡಲಿಲ್ಲ ಇದು ನನ್ನ ಹುಟ್ಟೂರಿಗೆ ಋಣ ತೀರಿಸಲು ಒಂದು ಸದಾವಕಾಶವಾಗಿದೆ ನಾನು ಚುನಾಯಿತ ಜನಪ್ರತಿನಿಧಿಯಾಗಿ ವಿಜೇತನಾಗಿದ್ದರೂ ನಮ್ಮ ಸಂಘಟನೆಯಿಂದ ಎಂದಿಗೂ ಹಿಂದೆ ಸರಿಯಲಾರೆ ಅಲ್ಲದೇ ಸ್ವತಂತ್ರ ಸದಸ್ಯನಾಗಿ ಜನಸೇವೆ ಮಾಡುತ್ತೇನೆ ಹೊರತು ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಪ್ರಮುಖ ರಾಜಕೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಂಡು ಗ್ರಾಮದ ಅಭಿವೃದ್ದಿಗೆ ಒತ್ತು ನೀಡಿ ನಮ್ಮ ಸಂಘಟನೆಗೆ ಉತ್ತಮ ಹೆಸರು ಬರುವಂತಹ ಕೆಲಸಗಳನ್ನು ಮಾಡುತ್ತೆನೆ ನಾನು ರಾಜಕೀಯವಾಗಿ ಏನೇ ನಿರ್ಧಾರ ಕೈಗೊಳ್ಳಬೇಕಾದರೂ ನನಗೆ ಮತ ಹಾಕಿರುವ ೪೬೯ ಮತದಾರೆರ ತೀರ್ಮಾನಕ್ಕೆ ಬದ್ದನಾಗಿರುತ್ತೆನೆ ಅಂಬೇಡ್ಕರ್ ಆಶಯಗಳಂತೆ ನಡೆಯುವುದೇ ನನ್ನ ಗುರಿ ಇಂದು ನೀವು ಮಾಡಿದ ಸನ್ಮಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಎಚ್ಚರಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿ.ವಿ.ಬಿ.ಎ ರಾಜ್ಯ ಕಾರ್ಯಾಧ್ಯಕ್ಷ ಮುನಿಕೃಷ್ಣ, ರಾಜ್ಯ ಕಾರ್ಯದರ್ಶಿಗಳಾದ ಆಲೂರು ಮುನಿರಾಜು, ಸುರೇಶ, ಕಾರ್ಮಿಕ ಘಟಕದ ವಿಭಾಗೀಯ ಅಧ್ಯಕ್ಷ ನೇರಳಘಟ್ಟರಾಮಮೂರ್ತಿ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಮುನಿರಾಜು, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಸೋಲೂರು ನಾಗರಾಜ್, ತಾ.ಉಪಾಧ್ಯಕ್ಷೆ ನರಗನಹಳ್ಳೀ ಶಿವನಂದ್, ಸಂಘಟನಾ ಕಾರ್ಯದರ್ಶಿ ನೀಲೇರಿ ನಾಗರಾಜ್, ಟೌನ್ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.