ಸಂಘಟನೆಯಿಂದ ಭದ್ರತೆ-ಮಡಿವಾಳರ

ಸವಣೂರ,ನ13 ಖಾಸಗಿ ಶಾಲಾ ಶಿಕ್ಷಕರು ಸಂಘಟನೆಗೊಂಡಲ್ಲಿ ಮಾತ್ರ ಸರ್ಕಾರದಿಂದಕನಿಷ್ಠ ಭದ್ರತೆ ಪಡೆಯಲು ಸಾಧ್ಯವಾಗಲಿದೆಎಂದುಕರ್ನಾಟಕ ಖಾಸಗಿ ಶಾಲಾ ಶಿಕ್ಷಕರ ಬಳಗದ ಜಿಲ್ಲಾಅಧ್ಯಕ್ಷ ನಿಂಗಪ್ಪ ಮಡಿವಾಳರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ದಿ. ರಾಯಲ್‍ಎಜುಕೇಷನ್‍ಅಕಾಡಮಿಯ ಪ್ರೌಢ ಶಾಲೆಯಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ಖಾಸಗಿ ಶಾಲಾ ಶಿಕ್ಷಕರ ಬಳಗದ ತಾಲೂಕುಘಟಕಉದ್ಘಾಟನೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಕರೊನಾ ಹಿನ್ನಲೆಯಲ್ಲಿಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಸೂಕ್ತ ನೆರವು ಹಾಗೂ ನಿರಂತರ ಭದ್ರತೆ ನೀಡಲು ಸಂಘಟನೆಯ ಮೂಲಕ ಹೋರಾಟ ಕೈಗೊಳ್ಳುವದು ಅವಶ್ಯವಾಗಿದೆಎಂದರು.
ನೂತನತಾಲೂಕುಘಟಕದಅಧ್ಯಕ್ಷ ಎಚ್.ಎನ್.ಬಡಗೇರಅಧ್ಯಕ್ಷತೆ ವಹಿಸಿ ಮಾತನಾಡಿ, ಖಾಸಗಿ ಶಾಲಾ ಶಿಕ್ಷಕರು ಉತ್ತಮ ಪ್ರತಿಭೆಯನ್ನು ಹೊಂದಿದ್ದರು ಸಹ ಅವಕಾಶಕ್ಕಾಗಿ ಪರದಾಡುವಂತಾಗಿದೆ. ಆದ್ದರಿಂದ, ಸಂಘಟನೆಯೊಂದಿಗೆ ಸರ್ಕಾರವನ್ನುಎಚ್ಚರಿಸಲು ಸರ್ವರು ಬೆಂಬಲವನ್ನು ನೀಡಬೇಕುಎಂದರು.
ತಾಲೂಕುಘಟಕದಉಪಾಧ್ಯಕ್ಷೆ ಸುಮಾ ಜೋಶಿ, ಕಾರ್ಯದರ್ಶಿ ಐ.ಎಸ್.ಬರದೂರ, ಪದಾಧಿಕಾರಿಗಳಾದ ವೈ.ಜಿ.ಸೋಮಕ್ಕನವರ, ಕೆ.ಜಿ.ಪಾಟೀಲ, ಶಿವಣ್ಣ ಕಂಬಾರ, ದೇವರಾಜ್. ಜಿ., ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಸದಸ್ಯರಾದ ಕಾಳಪ್ಪ ಲಮಾಣಿ ಹಾಗೂ ಮಂಜುನಾಥ ಹರಿಜನಕಾರ್ಯಕ್ರಮ ನಿರ್ವಹಿಸಿದರು.