ಸಂಘಟನೆಯಿಂದ ಉತ್ತಮ ಶಕ್ತಿ ರೂಪುಗೊಳ್ಳಲು ಸಾಧ್ಯ

ಚನ್ನಗಿರಿ.ನ.೧೦; ಕನ್ನಡ ನಾಡು ನುಡಿಗೆ ಮತ್ತು ಚಲನಚಿತ್ರರಂಗಕ್ಕೆ ದಿವಂಗತ ಶಂಕರ್‌ನಾಗ್‌ರವರು ನೀಡಿದ ಕೊಡುಗೆ ಅಪಾರವಾಗಿದೆ ಎಂದು ಚನ್ನಗಿರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಪವಾರ್ ಹೇಳಿದರು. ಪಟ್ಟಣದ ಗಾಂಧಿ ವೃತ್ತದಲ್ಲಿ ಚನ್ನಮ್ಮಾಜಿ ಕಾರು ಚಾಲಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಕಾರು ಚಾಲಕರ ದಿನಾಚರಣೆ ಮತ್ತು ದಿವಂಗತ ಶಂಕರ್‌ನಾಗ್‌ರವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಮಾತನಾಡಿ ವೃತ್ತಿ ಯಾವುದಾದರೂ ಪ್ರಾಮಾಣ ಕವಾಗಿ ಮತ್ತು ಶ್ರದ್ದೆಯಿಂದ ಮಾಡಿದಾಗ ಆ ವೃತ್ತಿಗೆ ಗೌರವ ದೊರಕುತ್ತದೆ ಎನ್ನುವುದನ್ನು ದಿವಂಗತ ಶಂಕರ್‌ನಾಗ್‌ರವರು ಸಾಕಷ್ಟು ಚಲನ ಚಿತ್ರಗಳ ಮೂಲಕ ಸಮಾಜಕ್ಕೆ ತೋರಿಸಿಕೊಡುವ ಮೂಲಕ ಚಾಲಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.ಸಾಕಷ್ಟು ಚಲನಚಿತ್ರಗಳಲ್ಲಿ ನಟಿಸಿರುವ ಅವರು ಚಾಲಕರಿಗೆ ಗೌರವವನ್ನು ತಂದು ಕೊಟ್ಟಿದ್ದಾರೆ.

ಸಂಘಟನೆಯಿಂದ ಉತ್ತಮ ಶಕ್ತಿ ರೂಪುಗೊಳ್ಳಲು ಸಾಧ್ಯವಿದೆ ಎಂದರು. ಅದರಂತೆ ಸಂಘಟನೆಯಿಂದ ನಮಗೆ ಬೇಕಾದಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾದ್ಯವಿದೆ ಎಂದರು. ಚನ್ನಮ್ಮಾಜಿ ಕಾರು ಚಾಲಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ಮುಂದಿನ ದಿನಗಳಲ್ಲಿ ಕಾರು ಚಾಲಕರ ಸಂಘದವತಿಯಿಂದ ಮತ್ತಷ್ಟು ಉತ್ತಮಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಾರು ಚಾಲಕರ ಸಂಘದ ಉಪಾಧ್ಯಕ್ಷ ಗಣೇಶ್, ಮಲ್ಲಿಕಾರ್ಜುನ್, ಪದಾಕಾರಿಗಳಾದ ರಾಜು, ಅಣ್ಣಪ್ಪ,ವೆಂಕಟೇಶ್,ಸಾಧಿಕ್, ರಾಜಶೇಖರಯ್ಯ, ಜಿತೇಂದ್ರರಾಜ್ ರಮೇಶ್, ಮಂಜುನಾಥ್ ಇತರರು ಹಾಜರಿದ್ದರು.
ಪೋಟೋ-೧೪