ಸಂಘಟನೆಯಿಂದ ಅಭಿವೃದ್ಧಿ -ಕೊಡುಗೆ ಸಾಧ್ಯ: ನಿತಿನ್ ನಾಯಕ್

ಕಲಬುರಗಿ,ಜು.16: ಸಂಘಟನಾತ್ಮಕವಾಗಿ ಒಟ್ಟುಗೂಡಿ ಒಂದು ಭಾಗದ ಅಭಿವೃದ್ಧಿಗೆ ನೆರವಾಗುವುದಕ್ಕೆ ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘ ಮಾದರಿಯಾಗಿದೆ ಎಂದು ಕಲಬುರ್ಗಿಯ ಶ್ರೀ ಗುರು ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಆಡಳಿತ ನಿರ್ದೇಶಕರಾದ ನಿತಿನ್ ನಾಯಕ್ ಹೇಳಿದರು.
ದಕ್ಷಿಣ ಕನ್ನಡ ಸಂಘದ 58ನೇ ವಾರ್ಷಿಕ ಮಹಾಸಭೆಯ ಪ್ರಯುಕ್ತ ಜುಲೈ 16 ರಂದು ಕಲಬುರ್ಗಿ ಸಮೀಪದ ಮೇಳಕುಂದ( ಬಿ) ಗ್ರಾಮದ ಅನುಗ್ರಹ ಫಾರ್ಮ್ಸ್ ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಕರಾವಳಿಯಿಂದ ಬಂದ ದಕ್ಷಿಣ ಕನ್ನಡ ಸಂಘದ ಜನರು ಈ ಭಾಗದಲ್ಲಿ ಸಂಘಟನೆಯ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸಿ ಉತ್ತಮ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಎಲ್ಲರೂ ಮನಸ್ಸು ಮಾಡಿ ದುಡಿದಾಗ ಯಶಸ್ಸು ಸಾಕಾರಗೊಳ್ಳುತ್ತದೆ ಎಂದು ಹಾರೈಸಿ ಸಸಿ ನೀಡುವ ಮೂಲಕ ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಂಘ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ ಕಲ್ಬುರ್ಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಅವರು ಮಾತನಾಡಿ ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದು ಬಂದ ಕರಾವಳಿಗರು ಹೋದಲ್ಲೆಲ್ಲ ತಮ್ಮ ವಿಚಾರಧಾರೆಗಳನ್ನು ಬಿತ್ತಿ ಕಲಬುರ್ಗಿ ಭಾಗದ ಅಭಿವೃದ್ಧಿಗೆ ನೆರವಾಗಿರುವುದು ಪ್ರಶಂಸನೀಯ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಹೋಟೆಲ್ ಮತ್ತಿತರ ಉದ್ಯಮಗಳನ್ನು ನಡೆಸಿ ಈ ಭಾಗದಲ್ಲಿ ಉದ್ಯೋಗದಾತರಾಗಿ ಮತ್ತು ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವುದರ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಿ ನಿಂತಿರುವುದು ದಕ್ಷಿಣ ಕನ್ನಡಿಗರ ಹೆಮ್ಮೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಸತ್ಯನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸದಸ್ಯರಾದ ವೆಂಕಟೇಶ ಕೆದಿಲಾಯ ಅವರು ಶುಭ ಹಾರೈಸಿ ಮಾತನಾಡಿದರು. ಗೌರವಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಜೊತೆ ಕಾರ್ಯದರ್ಶಿ ಮಮತಾ ಬಿ
ಯಡ್ರಾಮಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರ ನೀಡಿದರು. ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಗಳಾಗಿ ಪುರಂದರ ಭಟ್ ಅವರನ್ನು ಆಯ್ಕೆ ಮಾಡಲಾಯಿತು ನಿರ್ಗಮಿತ ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಸ್ವಾಗತಿಸಿದರು. ಚಂದ್ರಕಲಾ ಉಪಾಧ್ಯಾಯ ಪ್ರಾರ್ಥನ ಗೀತೆಯನ್ನು ಹಾಡಿದರು. . ಈ ಸಂದರ್ಭದಲ್ಲಿ ಗಂಗಾಧರ ತಂತ್ರಿ, ನರಸಿಂಹ ಮೆಂಡನ್, ಮಹಾ ಕೀರ್ತಿ ಶೆಟ್ಟಿ , ಗಿರಿಧರ ಭಟ್, ವಿದ್ಯಾಧರ ಭಟ್, ದಿವಾಕರ ಶೆಟ್ಟಿ, ರತ್ನಾಕರ ರಾವ್, ಲಕ್ಷ್ಮಿ ಪ್ರಶಾಂತ್ ಪೈ , ಪ್ರಭಾಕರ ಉಪಾಧ್ಯಾಯ, ಚಂದ್ರಶೇಖರ ಶೆಟ್ಟಿ, ಅರುಣಾಚಲ ಭಟ್, ಸುದರ್ಶನ ಜತ್ತನ್, ಗಿರೀಶ್ ಉಡುಪ, ಆಶಾ ಮೋಹನ್, ವಿದ್ಯಾರಾಣಿ ಭಟ್ , ಪ್ರಮೀಳಾ ಪೆರ್ಲ, ಸವಿತಾ ಗುತ್ತೇದಾರ್ , ಡಾ. ರಕ್ಷಾ ಸತ್ಯನಾಥ ಶೆಟ್ಟಿ, ಶೀಲಾ ರತ್ನಾಕರ್,ರೇಣುಕಾ ಶ್ರೀಕಾಂತ್,ತುಳಸಿ ಶಿರ್ಲಾಲು ಸಂತೋಷ್ ಪೂಜಾರಿ, ಸತ್ಯಾನಂದ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಭಾಕರ ಉಪಾಧ್ಯಾಯ ಮತ್ತು ಡಾ. ಸದಾನಂದ ಪೆರ್ಲ ಅವರನ್ನು ಹಾಗೂ ವಿಶೇಷ ಭೋಜನ ಕೂಟ ಏರ್ಪಡಿಸಿದ ಸತ್ಯನಾಥ ಶೆಟ್ಟಿ ಮತ್ತು ಡಾ. ರಕ್ಷಾ ಶೆಟ್ಟಿ ದಂಪತಿಗಳನ್ನು ಶಾಲು ಹಾಗೂ ಪುಷ್ಪ ನೀಡಿ ಸನ್ಮಾನಿಸಲಾಯಿತು.