ಸಂಘಟನೆಯಲ್ಲಿ ತೊಡಗಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು :ಜು:24 ಜೆ.ಡಿ.ಎಸ್. ಪಕ್ಷಕ್ಕೆ ಸಂಡೂರು ತಾಲ್ಲೂಕಿನಲ್ಲಿ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಳವಾಗಿರುವುದು ಸಂತಸ ಸೇರ್ಪಡೆಯಾದ ಬಳಿಕ ವಾಟ್ಸ್‍ಆಪ್ ಫೇಸ್ ಬುಕ್‍ನಲ್ಲಿ ಉಳಿದರೆ ಸಾಲದು ಸೇರ್ಪಡೆಯಾದ ನಂತರ 2008-18ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ರೈತರ ಸಾಲ ಮನ್ನ ವಯೋವೃದ್ದರಿಗೆ ಮಾಸಾನ ಪಿಂಚಣಿ ಇಂಥಹ ಹತ್ತು ಹಲವಾರು ಯೋಜನೆಗಳನ್ನಜನಗಳ ಬಳಿ ಹೋಗಿ ಜಾಗೃತಿ ಮೂಡಿಸುವುದರ ಮೂಲಕ ಪಕ್ಷವನ್ನು ಬಲಪಡಿಸಿ ಸಂಘಟನೆ ಮಾಡುವುದುರ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರ ಜೆ.ಡಿ.ಎಸ್. ತೆಕ್ಕೆಗೆ ಬರುವವರೆಗೂ ಶ್ರಮಿಸಬೇಕಾಗಿರುವುದು ಅತೀ ಅವಶ್ಯ. ಪಕ್ಷದ ಕಾರ್ಯಕರ್ತರು ಇಂದಿನಿಂದಲೇ ಜೆ.ಡಿ.ಎಸ್. ಪ್ರಚಾರ ಕೈಗೊಳ್ಳಲು ಸಾಧನೆ ಮೂಲಕ ಶ್ರಮಿಸಬೇಕಾಗಿದೆ ಎಂದು ಜೆ.ಡೆ.ಎಸ್ ಪಕ್ಷ ಕಾರ್ಯಧ್ಯಕ್ಷ ಕಮತೂರು ಮಲ್ಲೇಶರವರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಅವರು ಎಲ್.ಬಿ. ಕಾಲೋನಿಯ 11ನೇ ವಾರ್ಡಿನ ದಿ. ಸಿರಿಗೇರಿ ಪರಪ್ಪನವರ ಮಹಡಿ ಮೇಲಿರು ವಪಕ್ಷದ ಕಚೇರಿಯಲ್ಲಿ ನಾರಾಯಣಪುರ ಗ್ರಾಮದ ಮೂಕ ಬಸಪ್ಪ ಅವರ ಸಂಗಡಗಿಗರನ್ನು ಮಲ್ಲೇಶ್ ಕಮತುರು ರವರ ಸಮ್ಮುಖದಲ್ಲಿಜೆ.ಡಿ.ಎಸ್. ಪಕ್ಷ ಅಧಿಕೃತವಾಗಿ ಸೆರ್ಪಡೆ ಮಾಡಿದ ನಂತರ ಮಾತನಾಡಿದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಎಸ್. ಸಿ ವಿಭಾಗದ ಚಿನ್ನಾಪುರಿ ಎನ್. ಎಸ್.ಸಿ. ವಿಭಾಗದ ಗೌರವಾಧ್ಯಕ್ಷ ಮತ್ತು ಪಕ್ಷದ ಪ್ರಧನ ಕಾರ್ಯದರ್ಶಿಗಳಾದ ಸೈಯದ್ ಹುಸೇನ್ ಪೀರಾ .ಡಿ. ಕೆ.ಕೆ. ಮೆಹಬೂಬ್ ಬಾಷ ಶಫಿ ಮಂಜುನಾಥ ಉಪಸ್ಥಿತರಿದ್ದರು. ಸೇರ್ಪಡೆಯಾದವರುಪಕ್ಷವನ್ನು ಕಟ್ಟಿ ಬೆಳೆಸುವ ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡಿದಾಗ ಮಾತ್ರ ಕೆಲಸದ ಬದಲಾವಣೆ ಸಾಧ್ಯ ಎಂದು ತಿಳಿಸಿದರು.