ಸಂಘಟನೆಗಳು ಹೊಟ್ಟೆಪಾಡಿಗೆ ಆಗದೇ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲಿ

ಆಳಂದ:ನ.19:ಇಂದಿನ ಸಮಾಜಗಳಲ್ಲಿ ಹಲವಾರು ಸಂಘಟನೆಗಳು ಹೊಟ್ಟೆಪಾಡಿಗಾಗಿ ಹುಟ್ಟಿಗೊಳ್ಳುತ್ತಿವೆ ಅವುಗಳು ಹೊಟ್ಟೆಪಾಡಿಗೆ ಆಗದೇ ಸಮಾಜ ಅಭಿವೃದ್ಧಿಗಾಗಿ ಕೆಲಸ ಮಾಡಲಿ ಎಂದು ಮೈಸೂರಿನ ಊರಳಿಂಗ ಪೇದ್ದಿ ಮಠದ ಡಾ. ಜ್ಞಾನಪ್ರಕಾಶ ಸ್ವಾಮೀ ಸಲಹೆ ನೀಡಿದರು.
ತಾಲೂಕಿನ ಚಿಂಚನೂರ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಅಂಬೇಡ್ಕರ ಅವರು ಮೊದಲು ಶಿಕ್ಷಣ ನಂತರ ಸಂಘಟನೆ ಹೋರಾಟ ಎಂದು ಹೇಳಿದ್ದಾರೆ. ಇಂದಿನ ಸಮಾಜದಲ್ಲಿನ ಯುವಕರು, ಶಿಕ್ಷಣ ಮರೆತು ಬರೀ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಇದನ್ನು ನಿಲ್ಲಿಸಿ ಸಮಾಜದ ಅಂಧಕಾರ ಮೂಡನಂಬಿಕೆಯಿಂದ ಹೊರ ಬಂದು ಉತ್ತಮ ಶಿಕ್ಷಣ ವಂತರಾಗಿ ಸಮಾಜದಲ್ಲಿ ಮುಂದೆ ಬರಬೇಕೆಂದು ಹೇಳಿದರು.
ಮಾಜಿ ಸಚಿವ ಹಾಗೂ ಚಿತ್ತಾಪೂರ ಶಾಸಕ ಪ್ರೀಯಂಕ ಖರ್ಗೇ ಮಾತನಾಡಿ ಮೂರ್ತಿ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು ಬಾಬಾ ಸಾಹೇಬರನ್ನು ಅರಿತುಕೊಂಡಾಗ ಮಾತ್ರ ಪ್ರಭುದ್ವ ಭಾರತ ನಿರ್ಮಾಣವಾಗಲು ಸಾಧ್ಯ ಸ್ವಾತಂತ್ರ್ಯ ನಂತರ ದೇಶದಲ್ಲಿ ಇದ್ದ 571 ಸಣ್ಣ ಪುಟ್ಟ ಸಾವiರಾಜ್ಯಗಳನ್ನು ಒಂದು ಗೊಡಿಸಿ ದೇಶದ ವೈವಿದ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಆ ಸಂದರ್ಭದಲ್ಲಿ ದೇಶ ಜನರು ಹಿತ ಕಾಪಾಡುವ ಸಮಾನತೆಯ ಸಾಧಿಸಿಕೊಂಡು ಹೋಗುವ ಸಂವಿಧಾನ ಅಗತ್ಯ ಎಂದರು.
ಪಂಚವರ್ಣ ಧ್ವಜವನ್ನ ನೇರವೇರಿಸಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತಿಮೂಡ ಅವರು ಮಾತನಾಡಿ ಇಂದು ನಾವು ಎಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ನಾವು ಇಂತಹ ಉನ್ನತ ಸ್ಥಾನಕ್ಕೆ ಬರಲು ಸಂವಿಧಾನವೇ ಕಾರಣ. ಸಂವಿಧಾನ ಲಾಭ ಪಡೆಯಬೇಕಾದರೆ ಎಲ್ಲರೂ ಮೊದಲು ಶಿಕ್ಷಣಕ್ಕೆ ಆದ್ಯತೆಕೊಡಬೇಕು ಅಂದಾಗ ಸಾಧ್ಯ ಎಂದು ಹೇಳಿದರು.

ಬಸವಕಲ್ಯಾಣ ಹತ್ಯಾಳ ಬುದ್ದ ವಿಹಾರದ ಭಂತೆ ಧಮ್ಮನಾಗ, ಕಲಬುರಗಿಯ ಸುಲಫುಲ ಮಠದ ಡಾ. ಸಾರಂಗದರ ದೇಶಿ ಕೇಂದ್ರ ಮಹಾ ಸ್ವಾಮಿಗಳ, ಸಿದ್ಧ ಬಸವ ಕಬೀರ ನಂದ ಮಹಾ ಸ್ವಾಮಿಗಳ, ಸಿದ್ಧಮಲ್ಲ ಶಿವಾಚಾರ್ಯರು, ಗಂಗಾಧರ ಹಿರೇಮಠ, ಡಾ. ವಿಠ್ಠಲ ದೊಡ್ಡಮನಿ, ಡಾ. ಡಿ.ಜಿ. ಸಾಗರ. ವಿಜಯಕುಮಾರ ಜೀ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಶೋಭಾ ಶಿರಸಗಿ, ಸದಸ್ಯರಾದ ಶರಣಗೌಡ ಡಿ ಪಾಟೀಲ್, ಸಿದ್ಧರಾಮ ಪ್ಯಾಟಿ, ವಿಜಯಲಕ್ಷೀ ರಾಗಿ, ಗೋರಖನಾಥ ಸಜ್ಜನ, ಮಲ್ಲಿನಾಥ ಪಾಟೀಲ್ ಸ್ವಂತ, ನೀಲಕಂಠರಾವ ಮುಲಗೆ, ತಾ.ಪಂ ಇಓ ನಾಗಮೂರ್ತಿ ಶೀಲವಂತ ಸೇರಿದಂತೆ ಅನೇಕ ಗಣ್ಯ ವ್ಯಕ್ತಗಳು ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಡಾ. ಬಿ.ಆರ್. ಅಂಬೇಡ್ಕರ ತರುಣ ಸಂಘದ ಅಧ್ಯಕ್ಷ ಶಿವಶರಣಪ್ಪ ಸಜ್ಜನ ಸಭೆಯ ಅಧ್ಯಕ್ಷತೆ ವಹಿಸಿದರು.