ಸಂಘಟನೆಗಳು ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು

ಇಂಡಿ :ಡಿ.6:ಸಂಘಟನೆಗಳು ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು. ಅಂಬೇಡ್ಕರ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದ ಋಣ ತೀರಿಸಬೇಕು ಎಂದು ಶಹರ ಪೆÇಲೀಸ್ ಠಾಣೆಯ ಸಿಪಿಐ ಭೀಮನಗೌಡ ಬಿರಾದಾರ ಹೇಳಿದರು.

ಅವರು ಭಾನುವಾರ ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ದಲಿತ ಸಮನ್ವಯ ಸಮಿತಿ ತಾಲೂಕ ಪದಾ„ಕಾರಿಗಳ ಆಯ್ಕೆ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಘಟನೆಯ ಪದಾ„ಕಾರಿಗಳಾಗಿ ಆಯ್ಕೆಯಾದ ಯುವಕರ ಮೇಲೆ ಸಮಾಜದ ಹೊಣೆ ಹೆಚ್ಚಾಗುತ್ತಿದ್ದು,ಸಮಾಜದ ಕಟ್ಟಕಡೆಯ ಬಡ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ತಲುಪಿಸುವ ಕೆಲಸ ಸಂಘಟನೆಗಳು ಮಾಡಬೇಕು ಎಂದು ಹೇಳಿದರು.

ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೂರಮನ ಮಾತನಾಡಿ, ಅಂಬೇಡ್ಕರ ಅವರ ತತ್ವ,ಸಿದ್ದಾಂತದಂತೆ ಸಂಘಟನೆ ಮೂಲಕ ಸಮಾಜದ ಯುವ ಜನಾಂಗಕ್ಕೆ ಶಿಕ್ಷಣದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.ಅಂಬೇಡ್ಕರ ಅವರು ಹೇಳಿದಂತೆ ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಮಾಡಲು ಸಾಧ್ಯ.ಹೀಗಾಗಿ ತಾಲೂಕಿನ ಪ್ರತಿ ಗ್ರಾಮಕ್ಕೆ ತೆರಳಿ ಶೈಕ್ಷಣಿಕ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೆ ಇದ್ದು,ಕಾನೂನಿನ ಅಡಿಯಲ್ಲಿ ಅದನ್ನು ತಡೆಗಟ್ಟಲು ಸಂಘಟನೆ ದಿಟ್ಟ ಹೆಚ್ಚೆ ಇಡಲಾಗುತ್ತದೆ ಎಂದು ಹೇಳಿದರು.

ನೂತನ ಪದಾ„ಕಾರಿಗಳು:ದಲಿತ ಸಮನ್ವಯ ಸಮಿತಿ ತಾಲೂಕ ಸಂಚಾಲಕ ಶಿವಾನಂದ ಮೂರಮನ ನೇತ್ರತ್ವದಲ್ಲಿ ನೂತನ ತಾಲೂಕ ಪದಾ„ಕಾರಿಗಳನ್ನು ಆಯ್ಕೆ ಮಾಡಲಾಯಿತು.ಪಿರಪ್ಪ ಕಟ್ಟಿಮನಿ(ಉಪಾಧ್ಯಕ್ಷ),ಶಿವು ತೆನ್ನಿಹಳ್ಳಿ(ನಗರ ಘಟಕದ ಅಧ್ಯಕ್ಷ), ವಿಠಲ ಗಾಯಕವಾಡ(ಕಾರ್ಯದರ್ಶಿ), ಮಲಕಾರಿ ಬನಸೋಡೆ(ಪ್ರಧಾನ ಕಾರ್ಯದರ್ಶಿ), ಕುಲಂಕಾರ ಶಿಂಧೆ(ತಾಂಬಾ ವಲಯ ಅಧ್ಯಕ್ಷ),ನಿತೀಶ ತಳಕೇರಿ(ಅಗರಖೇಡ ವಲಯ ಅಧ್ಯಕ್ಷ), ಶಿವಯೋಗಿ ಹರಿಜನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.