ಸಂಘಟನೆಗಳು ಸಮಾಜಮುಖಿಯಾಗಬೇಕಾಗಿದೆ. ಸ್ವಾಮಿ ಸುಭೇದಾನಂದಜೀ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು23: ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ರಾಮಕೃಷ್ಣ ಗೀತಾಶ್ರಮ ಸುಬೇದಾನಂದ ಸ್ವಾಮಿಜಿ ಹೇಳಿದರು.
ಹೊಸಪೇಟೆ ಶ್ರೀ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ನಾಟ್ಯವೇದ ಕಲಾಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಇತ್ತಿಜೆಗೆ ಕೆಲ ಸಂಸ್ಥೆಗಳು ಉದ್ಘಾಟನೆ, ಪದಾಧಿಕಾರಿಗಳ ನೇಮಕಕ್ಕೆ ಮಾತ್ರ ಸಿಮೀತವಾಗುತ್ತಿರುವುದು ವಿಷಾದಕರ, ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ದಿಗೆ ಒತ್ತುಕೊಟ್ಟು ಮತ್ತು ಸ್ವಚ್ಛ, ಸಂವೃದ್ದ ಹಾಗೂ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ ಎಂದರು.
ಮುಖಂಡ ಸಂದೀಪ್ ಸಿಂಗ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಬೆಳೆಯಬೇಕು ಈ ನಿಟ್ಟಿನಲ್ಲಿ ಭರತನಾಟ್ಯ ಮತ್ತು ಸಂಗೀತ ಅತ್ಯಗತ್ಯವಾಗಿದೆ. ನಮ್ಮನ್ನು ಕ್ರೀಯಾಶೀಲವಾಗುವದ ಜೊತೆ ರೋಗಮುಕ್ತವಾಗಿ ಇವರುವಂತೆ ಮಾಡಲು ಸಂಗೀತ ಹಾಗೂ ನಾಟ್ಯಗಳು ತಮ್ಮದೆ ಆದ ಪಾತ್ರವಹಿಸಲಿವೆ ಎಂದರು.
 ವೇದಿಕೆಯಲ್ಲಿ ಸುಗಮ, ಸಂಗೀತಾ, ಜಾನಪದಗೀತೆ  ಮತ್ತು ಭರತನಾಟ್ಯ ತಂಡಗಳು ನಾನಾ ಸಂಸ್ಕೃತಿ ಕಾರ್ಯಕ್ರಮಗಳನ್ನು ಸಾದರ ಪಡಿಸಿದವು.
ಕನ್ನಡ ಕಲಾಸಂಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್, ಸಾಹಿತ್ಯ ಪರಿಷತ್ತು ಅದ್ಯಕ್ಷ ಮದುರ ಚಿನ್ನಶಾಸ್ತ್ರಿ ಹಿರೇಮಠ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಡಿ.ಹನುಮಂತಪ್ಪ ಪಾಲ್ಗೊಂಡಿದ್ದರು.

Attachments area