
ಕಲಬುರಗಿ:ಆ.16: ಸಂಘಟನೆಗಳು ಕಾಲಕ್ಕೆ ಅನುಗುಣವಾಗಿ ಹೊಸ ಚಿಂತನೆ ಮತ್ತು ತಂತ್ರಗಳನ್ನು ರೂಪಿಸಿಕೊಂಡು ಎಲ್ಲ ಮನಸ್ಸುಗಳು ಒಂದಾಗಿ ಬೆರೆತಾಗ ಶಕ್ತಿ ಒದಗುತ್ತದೆ ಎಂದು ಶಿಕ್ಷಣ ತಜ್ಞ ಡಾ. ದೇವಾನಂದ ಆರ್. ಗಾವಂಕರ್ ಹೇಳಿದರು.
ಕಲ್ಬುರ್ಗಿಯ ದಕ್ಷಿಣ ಕನ್ನಡ ಸಂಘದ.ವತಿಯಿಂದ ಆಗಸ್ಟ್ 15ರಂದು ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಕಾಲಕ್ಕೆ ಅನುಗುಣವಾಗಿ ತೀವ್ರತೆ ಮತ್ತು ನಿರಂತರತೆಯನ್ನು ಕಾಪಾಡಿಕೊಂಡರೆ ಯಶಸ್ಸು ಖಂಡಿತ. ಸಾಮಥ್ರ್ಯ ಮತ್ತು ಪ್ರತಿಭೆಗಳನ್ನು ನಮ್ಮೊಳಗೆ ಹಂಚಿಕೊಂಡಾಗ ಯಶಸ್ಸಿನ ಗುರಿ ಮುಟ್ಟಲು ಸುಲಭವಾಗುತ್ತದೆ. ಕಲಬುರ್ಗಿಯಲ್ಲಿ 30 ವರ್ಷಗಳ ಸೇವಾ ಅವಧಿ ತೃಪ್ತಿ ನೀಡಿದ್ದು ಈ ಭಾಗದಿಂದ ಹೆಚ್ಚು ಅನುಭವಗಳನ್ನು ಪಡೆದುಕೊಂಡಿದ್ದೇನೆ. ದ .ಕ.ಸಂಘ ಮಾದರಿಯಾಗಿ ಕಾರ್ಯನಿರ್ವಹಿಸಿ ಬದ್ಧತೆ ದಾಖಲಿಸಿದೆ ಹೇಳಿದರು.
ಲೇಖಕಿ ಶ್ರೀಮತಿ ಶಾಲಿನಿ ಗಾವಂಕರ್ ಮಾತನಾಡಿ ಕಲ್ಬುರ್ಗಿಯು ಸಮಾಜ ಜೀವನವನ್ನು ಕಲಿಸಲು ಪ್ರೇರಣೆ ನೀಡಿದೆ ಮತ್ತು ದಕ್ಷಿಣ ಕನ್ನಡ ಸಂಘವು ಕೌಟುಂಬಿಕ ವಾತಾವರಣವನ್ನು ಕಲ್ಪಿಸಿದೆ ಮುಂದಿನ ದಿನಗಳಲ್ಲಿ “ನೆನಪಿನ ಪುಟಗಳಿಂದ” ಕೃತಿ ರಚನೆಯಾಗುತ್ತಿದ್ದು ಕಲಬುರ್ಗಿಯಲ್ಲಿ ಬಿಡುಗಡೆ ಮಾಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ ಮೂರರಂದು ನಡೆಯುವ ದಕ್ಷಿಣ ಕನ್ನಡ ಸಂಘದ ಕ್ರಿಕೆಟ್ ಪಂದ್ಯಾಟದ ಲೋಗೋವನ್ನು ಉದ್ಯಮಿ ಸತ್ಯನಾಥ ಶೆಟ್ಟಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘ ಪ್ರಾರಂಭಿಸಿದ “ಹರ್ ಘರ್ ಮೀಟಿಂಗ್” ಕಲ್ಪನೆ ಬಂಧುತ್ವ ದ ಭಾವನೆ ಮೂಡಿಸುತ್ತದೆ.
ಸಂಘದ ವತಿಯಿಂದ ಸೆಪ್ಟೆಂಬರ್ ಹತ್ತರಂದು ಸದಸ್ಯರಿಗಾಗಿ ವಾರ್ಷಿಕ ಕ್ರೀಡೋತ್ಸವವನ್ನು ಹಾಗೂ ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿ ಹಬ್ಬವನ್ನು ವೈಭವದಿಂದ ಆಚರಿಸುವ, ರೂಪರೇಷೆ ನೀಡಿದರು. ಕ್ರೀಡಾ ಕಾರ್ಯದರ್ಶಿ ಮಹಾಕೀರ್ತಿ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ ಅವರು ಕ್ರಿಕೆಟ್ ಹಾಗೂ ವಿವಿಧ ಕ್ರೀಡೆಗಳ ವಿವರವನ್ನು ಒದಗಿಸಿದರು. ಕಾರ್ಯಕ್ರಮದಲ್ಲಿಕಲಬುರ್ಗಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ವಿದ್ಯಾ ರಾಣಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯಿಂದ ಒಗ್ಗಟ್ಟಾಗಿ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಲು ಕರೆ ನೀಡಿದರು.
ಡಾ. ದೇವಾನಂದ ಗಾವಂಕರ್ ಮತ್ತು ಶಾಲಿನಿ ಗಾವಂಕರ್ ಅವರನ್ನು ಶಾಲು ಹಾರ ಹಾಗೂ ಮೈಸೂರು ಪೇಟ ತೋರಿಸಿ ಸನ್ಮಾನಿಸಲಾಯಿತು. ಶ್ರೀಮತಿ ಚಂದ್ರಕಲಾ ಉಪಾಧ್ಯಾಯ ಪ್ರಾರ್ಥನೆ ಗೀತೆ ಹಾಡಿದರು. ಕಾರ್ಯದರ್ಶಿ ಪುರಂದರ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ , ವಿದ್ಯಾಧರ ಭಟ್ , ನರಸಿಂಹ ಮೆಂಡನ, ಡಾಕ್ಟರ್ ರಕ್ಷಾ ಸತ್ಯನಾಥ್ ಶೆಟ್ಟಿ ,ಪ್ರಮೀಳಾ ಪೆರ್ಲ, ಮಮತಾ ಯಡ್ರಾಮಿ, ಶಾರದಾ ಭಟ್ ಅರುಣಾಚಲ ವಿ ಭಟ್, ತುಳಸಿ ರೇಣುಕ ಶಿರ್ಲಾಲು ಸಂತೋಷ್ ಪೂಜಾರಿ, ಎನ್ ಕೃಷ್ಣ ಭಟ್, ಸತ್ಯಾನಂದ, ನರಹರಿ ತಂತ್ರಿ, ನರಸಿಂಹ ಮೆಂಡನ್ ಎಂ.ಎನ್.ಎಸ್ ಶಾಸ್ತ್ರಿ, ಗಂಗಾಧರ್ ಪೈ, ರಾಮಕೃಷ್ಣ ಕೆದಿಲಾಯ , ಶಶಿಕಲಾ ಶಾಸ್ತ್ರಿ, ವಾಣಿ ವೆಂಕಟೇಶ್ ಶ್ರುತಿ ಆರ್ ಕಡೇಚೂರ್, ಸುದರ್ಶನ್ ಜತ್ತನ್, ಗಣೇಶ ಕೆದಿಲಾಯ, ಗಿರಿಧರ ಭಟ್, ಮುರಳಿಧರ ಭಟ್, ಮಾನಸಿ ಆಚಾರ್ಯ ಮತ್ತಿತರರಿದ್ದರು.