ಸಂಘಟನೆಗಳಿಗೆ ಅಂಬೇಡ್ಕರ್ ತತ್ವ ಮೂಲ ಮಂತ್ರವಾಗಬೇಕು :ಡಾ. ಪೆರ್ಲ

ಕಲಬುರಗಿ:ಜೂ.21: ಸಂಘಟನೆ ಶಕ್ತಿಶಾಲಿಯಾಗಿ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಅಂಬೇಡ್ಕರ್ ಅವರ ಬೋಧನೆ ಶಿಕ್ಷಣ ಸಂಘಟನೆ ಹೋರಾಟ ಈ ಮಂತ್ರಗಳನ್ನು ಪಾಲಿಸುವುದರೊಂದಿಗೆ ಸಂಘ ಸಂಸ್ಥೆಗಳು ತಮ್ಮ ಬೆಳವಣಿಗೆಯನ್ನು ಹೊಂದಬೇಕಾಗಿದೆ ಎಂದು ಕಲ್ಬುರ್ಗಿ ಆಕಾಶವಾಣಿಯ ನ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ಹೇಳಿದರು
ರಾಜ್ಯ ಸರಕಾರಿ ಫಾರ್ಮಸಿಸ್ ಅಧಿಕಾರಿಗಳ ಸಂಘದ ಸರ್ವ ಸದಸ್ಯರ ಸಭೆ ಹಾಗೂ ಅಭಿನಂದನಾ ಸಭೆಯನ್ನು ಕಲ್ಬುರ್ಗಿಯಲ್ಲಿ ಜೂನ್ 18ರಂದು ಕಲ್ಬುರ್ಗಿ ಆಕಾಶವಾಣಿಯ ನಿವೃತ್ತ ಹಿರಿಯ ಅಧಿಕಾರಿ ಡಾ. ಸದಾನಂದ ಪೆರ್ಲ ಅವರು ಉದ್ಘಾಟಿಸಿ ಮಾತನಾಡಿ ರಾಜ್ಯ ಸರಕಾರಿ ಔಷಧ ಅಧಿಕಾರಿಗಳ ಸಂಘವು ಕರೋನದ ಸಂದರ್ಭದಲ್ಲಿ ಮಾನವೀಯ ಸೇವೆಯನ್ನು ಮಾಡಿ ಸಂಘಕ್ಕೆ ಅತ್ಯುತ್ತಮ ಹೆಸರನ್ನು ತಂದು ಕೊಟ್ಟಿದೆ ಮತ್ತು ಫಾರ್ಮಸಿಸ್ಟ್ ಅಧಿಕಾರಿಗಳ ಮಹತ್ವ ವೈದ್ಯರಷ್ಟೇ ಪ್ರಾಮುಖ್ಯವಾಗಿದ್ದು ಫಾರ್ಮಸಿಸ್ಟ್ ಸಂಬಂಧಪಟ್ಟಂತೆ ಇರುವ ಬಹುಕಾಲದ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು ಈಡೇರಿಸಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲು ಅನುವು ಮಾಡಿಕೊಡಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಔಷಧ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಎಸ್. ದೇಸಾಯಿ ಮಾತನಾಡಿ ಫಾರ್ಮಸಿಸ್ಟ್ ಅಧಿಕಾರಿಗಳ ಹಲವು ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಔಷಧ ಶೇಖರಣ ಕೇಂದ್ರ ತೆರೆಯುವಂತೆ ಒತ್ತಾಯಿಸಲಾಗಿದೆ ಮತ್ತು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರ ಜೊತೆ ಮಾತುಕತೆ ನಡೆಸಿ ಸಿಬ್ಬಂದಿಗಳ ನ್ಯಾಯೋಚಿತ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್, ಕಾರ್ಯದರ್ಶಿ ಸಂತೋಷ್ ಕುಸುಮ್ ಉಪ ನಿರ್ದೇಶಕರಾದ ನರಸಿಂಹ ರಾಜು, ಸಹಾಯಕ ನಿರ್ದೇಶಕರಾದ ಸುಮಂತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.