ಸಂಘಟನಾ ಚತುರನ ಅಗಲಿಕೆ ನೋವು ತಂದಿದೆ: ಶರಣೇಗೌಡ ಪೊಲೀಸ್ ಪಾಟೀಲ್


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.28: ಕನ್ನಡದ ಕಟ್ಟಾಳು, ಓರ್ವ ಉತ್ತಮ ಸಂಘಟನಾ ಚತುರ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ರಾಜಶೇಖರ್ ಅಂಗಡಿಯವರ ಅಕಾಲಿಕ ನಿಧನದಿಂದ ಒಬ್ಬ ಸಂಘಟನಾ ಚತುರನನ್ನು ಕಳೆದುಕೊಂಡು ಸಾಹಿತ್ಯ ಪರಿಷತ್ತು  ದುಃಖ ಪಡುವಂತಾಗಿದೆ ಎಂದು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಅಭಿಪ್ರಾಯ ಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ‘ರಾಜಶೇಖರ ಅಂಗಡಿಯವರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಚಟುವಟಿಕೆಗಳ ಸಂಘಟನೆಗಾಗಿ ಹಗಲಿರುಳು ದುಡಿಯುತ್ತಾ ಜಿಲ್ಲೆಯ ಸಾಹಿತ್ಯ ಪರಿಷತ್ತನ್ನು ಮನೆಮನೆಯ ಪರಿಷತ್ತನ್ನಾಗಿ ರೂಪಿಸಿದ ಕೀರ್ತಿ ರಾಜಶೇಖರ ಅಂಗಡಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈ ವೇಳೆ ಸಾಹಿತಿಗಳಾದ ಲಿಂಗಾರೆಡ್ಡಿ ಆಲೂರು, ಪವನ್ ಕುಮಾರ್ ಗುಂಡೂರು, ಕೋಶಾಧ್ಯಕ್ಷರಾದ ರಮೇಶ್  ಕುಲಕರ್ಣಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾದ ರಮೇಶ್ ಗಬ್ಬೂರು, ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ಮುಮತಾಜ್ ಬೇಗಂ, ಗೌರವ ಕಾರ್ಯದರ್ಶಿ ರುದ್ರೇಶ್ ಆರ್ಹಾಳ, ತಾಲ್ಲೂಕು ಅಧ್ಯಕ್ಷರಾದ ಶ್ರೀನಿವಾಸ್ ಅಂಗಡಿ, ಕವಿ ಶಿಕ್ಷಕ ಸುರೇಶ ಕಲಾಪ್ರಿಯಾ ತಮ್ಮ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸುಧಾತಾಯಿ ಬಡಿಗೇರ,  ಮೈಲಾರಪ್ಪ ಬೂದಿಹಾಳ, ವಿರುಪಾಕ್ಷಪ್ಪ ಸಿರವಾರ, ಮಾರುತಿ ಐಲಿ, ಮಲ್ಲಪ್ಪ, ಮುದಿಗೌಡ ಮಾಲಿ ಪಾಟೀಲ್, . ಶಿವಾನಂದ ತಿಮ್ಮಾಪುರ  ಮುಂತಾದವರಿದ್ದರು.

One attachment • Scanned by Gmail