ಸಂಘಟನಾ ಕಾರ್ಯದರ್ಶಿ ನೇಮಕ

ಮೈಸೂರು:ಮಾ:23: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಮೈಸೂರು ಇದರ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ. ವೆಂಕಟೇಶ್‍ರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಮೈಸೂರು ಜಿಲ್ಲಾ ಕ.ರಾ.ಸ.ನೌ. ಸಂಘದ ಅಧ್ಯಕ್ಷ ಜೆ. ಗೋವಿಂದರಾಜುರವರ ಶಿಫಾರಸ್ಸಿನ ಮೇರೆಗೆ 2021-24ನೇ ಸಾಲಿನ ಅವಧಿಗೆ ನೇಮಕ ಮಾಡಲಾಗಿದೆ ಎಂದು ಕ.ರಾ.ಸ.ನೌ.ಸಂ ಬೆಂಗಳೂರು ಇದರ ಅಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ.