ಸಿಂಧನೂರು,ಜೂ.೨೧-
ಸಹಕಾರ ಸಂಘಗಳಲ್ಲಿ ಹಣ ದುರುಪಯೋಗ ಮಾಡಿಕೊಂಡ ಪ್ರಕರಣ ಗಳನ್ನು ಶ್ರೀಘ್ರದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸಹಕಾರ ಸಂಘಗಳ ಜಿಲ್ಲಾ ಉಪನಿಬಂದಕರಾದ ಮನೋಹರ ಹೇಳಿದರು.
ನಗರದ ಸಹಕಾರ ಸಂಘದ ಉಪ ವಿಭಾಗದ ಕಛೇರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಿಂದಿನ ಕಾರ್ಯದರ್ಶಿಗಳು ಹಣ ದುರುಪಯೋಗ ಮಾಡಿಕೊಂಡಿದ್ದು ಅಂಥ ಪ್ರಕರಣಗಳನ್ನು ಬೇಗನೆ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘಗಳ ಬ್ಯಾಂಕಿನಲ್ಲಿ ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಅಂಥ ಸಂಘಗಳನ್ನು ಪತ್ತೆ ಹಚ್ಚಿ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ ಎಂದ ಅವರು ಸಂಘಗಳ ವ್ಯಾಪಾರ ವಹಿವಾಟು ಅಬಿವೃದ್ಧಿ ಅಡಿಯಲ್ಲಿ ಸಾಧಿಸಿದ ಪ್ರಗತಿ ಸಾಧನೆಗಳೆಷ್ಷು ಸಹಕಾರ ಸಂಘಗಳ ೨೦೨೨, ೨೦೨೩, ಸಾಲಿನ ಈ ತಿಂಗಳ ಅಂತ್ಯ ದೊಳಗೆ ಲೆಕ್ಕೆ ಪರಿಶೀಲನೆ ಮಾಡಿಸಬೇಕು ಎಂದರು.
ಹಣ ದುರುಪಯೋಗ ಮಾಡಿಕೊಂಡ ಪ್ರಕರಣ ಗಳಲ್ಲಿ ಸಿವೀಲ್ ಹಾಗೂ ಕ್ರೀಮಿನಲ್ ಪ್ರಕರಣಗಳ ಬಗ್ಗೆ ವರದಿ ನೀಡಬೇಕು ಎಂದು ಹೇಳಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಲ್ಲಯ್ಯ, ಆರ್ ಡಿ,ಸಿ,ಸಿ ಬ್ಯಾಂಕ ವ್ಯವಸ್ಥಾಪಕರು, ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.