ಸಂಘಗಳ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

ಮೈಸೂರು, ನ.19: ಯಾವುದೇ ಸಂಘಗಳು ಪ್ರಗತಿಹೊಂದಲು ಅದರಲ್ಲಿನ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ ಎಂದು ಮೈಸೂರು ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕಿ ಯಶೋಧ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿರುವ ವಾರ್ತಾಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಖಜಾನೆ ನೌಕರರ ಸಂಘದ ಜಿಲ್ಲಾ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಂದು ಇಲಾಖೆಯು ತನ್ನದೇ ಆದ ನೌಕರರ ಸಂಘವನ್ನು ರಚಿಸಿಕೊಂಡಿವೆ. ಅದೇ ರೀತಿಯಲ್ಲಿ ಇಂದು ಜಿಲ್ಲಾ ಖಜಾನೆ ನೌಕರರ ಸಂಘ ಅಸ್ಥಿತ್ವಕ್ಕೆ ಬಂದಿರುವುದು ಬಹಳ ಸಂತಸದ ಸಂಗತಿ ಎಂದರು.
ಸಂಘಗಳನ್ನು ಸ್ಥಾಪಿಸಿದರಷ್ಟೇ ಸಾಲದು. ಅದರ ಪ್ರಗತಿಗೆ ಸದಸ್ಯರುಗಳು ಯಾವುದೇ ರಾಜಕೀಯ ಮಾಡದೆ ಪರಸ್ಪರ ಸಹಕಾರ ಮನೋಭಾವದಿಂದ ನಡೆದುಕೊಳ್ಳುವುದು ಬಹಳ ಮುಖ್ಯ. ಈ ದಿಸೆಯಲ್ಲಿ ಅವರುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಬಹಳ ಹೇಳಿದ ಯಶೋಧ ಭವಿಷ್ಯದಲ್ಲಿ ಈ ಸಂಘವು ಪ್ರಗತಿ ಹೊಂದಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೌಕರರ ಸಮಸ್ಯೆಗಳು ಯಾವುದೇ ರೀತಿ ಇರಬಹುದು. ಈ ಸಮಸ್ಯೆಯನ್ನು ಬಗೆಹರಿಸುವಂತ ಕೆಲಸ ಮಾಡಬೇಕು ನೌಕರರು ಕ್ಷೇಮಾಭಿವೃದ್ಧಿ ಬೆಳವಣಿಗೆಯಾಗಬೇಕು ಖಜಾನೆ ನೌಕರರ ಆರೋಗ್ಯವನ್ನು ಕಾಪಾಡುವ ಜತೆಗೆ ಅವರ ಸಮಸ್ಯೆಗಳನ್ನು ಪರಿಹರಿಸುವ ಮುಖೇನ ಈ ನೌಕರ ಸಂಘ ಅತ್ಯಮೂಲ್ಯ ಸಂಘ ಮತ್ತೆ ಪುನರಾರಂಭವಾಗಿರುವುದು ನಮ್ಮೆಲ್ಲರಿಗೆ ಸಂತೋಷ ತರುವ ವಿಚಾರ ಎಂದು ತಿಳಿಸಿದರು
ಪ್ರಾಸ್ತಾವಿಕ ನುಡಿ ನುಡಿದ ಗಣೇಶ್ ಎನ್ ಕೆ ಉಪಾಧ್ಯಕ್ಷರು ಮೈಸೂರು ಜಿಲ್ಲಾ ಖಜಾನೆ ನೌಕರರ ಸಂಘ ಹಾಗೂ ನಿರ್ದೇಶಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು. ಇವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ಖಜಾನೆ ನೌಕರರ ಜಿಲ್ಲಾ ಸಂಘ ಮೈಸೂರು
ಉದ್ಘಾಟನಾ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಈ ದಿನ ಜರುಗಿದ ಸಂಘ ಅನ್ನೋದು ಶುದ್ಧ ಭಾರತೀಯ ಇತಿಹಾಸ ಪರಂಪರೆಯಲ್ಲಿ ಕ್ರಿಸ್ತಪೂರ್ವ 6ನೆ? ಶತಮಾನದಲ್ಲಿ ಭಗವಾನ್ ಬುದ್ಧರು ಪ್ರಯೋಗ ಮಾಡಿದ ಶಬ್ದವಾಗಿದ್ದು ಅದರ ಬಲ ಶಕ್ತಿ ಅನ್ನೋದರ ಜೊತೆಗೆ ಶಿಸ್ತುಬದ್ಧ ಚಟುವಟಿಕೆಯಿಂದ ಕೂಡಿದ ಅನೇಕ ಧ್ಯೇಯೋದ್ದೇಶಗಳನ್ನು ಹಾಗೂ ಶೀಲತೆಯಿಂದ ಕೂಡಿದ 1ಗುಂಪನ್ನು ಸಂಘ ಎಂದು ನಾವು ಭಾವಿಸುತ್ತೇವೆ ಈ ಎಲ್ಲಾ ಅಂಶಗಳನ್ನು ಒಳಗೊಂಡ ನಮ್ಮ ಮೈಸೂರು ಖಜಾನೆ ನೌಕರರ ಸಂಘ ರಾಜ್ಯಾಧ್ಯಕ್ಷರಾದ ಪಿ ಜಗದೀಶ್ ರವರ ನಿರ್ದೇಶನದಂತೆ ಜಿಲ್ಲಾ ತಾಲ್ಲೂಕು ಘಟಕ ಮತ್ತು ತಾಲೂಕು ಪಂಚಾಯಿತಿ ಘಟಕ ನೊಳಗೊಂಡಂತೆ ಸರ್ವ ಸದಸ್ಯರನ್ನು ಒಗ್ಗೂಡಿಸಿ ರಾಜ್ಯಕ್ಕೆ 1ಮಾದರಿ ಜಿಲ್ಲಾ ಸಂಘವಾಗಿ ಈದಿನ ರೂಪಿತವಾಗಿದೆ ಇದಕ್ಕೆ ನಮ್ಮ ಜಿಲ್ಲಾಧ್ಯಕ್ಷರಾದ ಹೇಮಂತ್ ರವರ ಸಂಘಟನಾ ಚಾತುರ್ಯ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ ಹಾಗೂ ರಾಜ್ಯಾಧ್ಯಕ್ಷರದ ಶ್ರೀ ಸಿ ಎಸ್ ಷಡಕ್ಷರಿ ಅವರು ಕಳೆದ ವಾರದ ಹಿಂದಷ್ಟೆ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೈಸೂರು ಭವ್ಯ ಪರಂಪರೆ ಉತ್ತಮ ಇತಿಹಾಸವುಳ್ಳ ಜಿಲ್ಲೆಯಾಗಿದ್ದು ಇಲ್ಲಿನ ನೌಕರ ವರ್ಗ ಸಂಘಟನಾ ಕಾರ್ಯದಲ್ಲಿ ತೊಡಗಬೇಕು ಆ ಮೂಲಕ ಹೊಸ ಮನ್ವಂತರದತ್ತ ಹೆಜ್ಜೆ ಇಡಲು ಸಾಧ್ಯ ಎಂಬ ಸಂದೇಶವನ್ನು ನೀಡಿದ್ದರು ಆ ಮುಖೇನ ಅವರ ಸೂಚನೆಯಂತೆ ಹತ್ತು ಹದಿನೈದು ದಿನಗಳಲ್ಲಿ ಸಂಘದ ಉದ್ಘಾಟನೆಯನ್ನು ಮಾಡಿ ಅಧ್ಯಕ್ಷರ ಜೊತೆ ನಾವು ಇದ್ದೇವೆ ಎಂದು ತಿಳಿಸಲು ಇಚ್ಛಿಸುತ್ತೇನೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ಕಳೆದ ವಾರ ನಮ್ಮ ರಾಜ್ಯಾಧ್ಯಕ್ಷ ಷಡಕ್ಷರಿರವರು ಮೈಸೂರಿಗೆ ಬಂದಂತ ಸಂದರ್ಭದಲ್ಲಿ ಈ ಸಂಘಟನೆಯಿಂದ ಸಂಘಟಿಸಬೇಕು ತುಂಬ ಎತ್ತರಕ್ಕೆ ಬೆಳೆಸಬೇಕು ನೌಕರರ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬೇಕು. ಈ ಸಂಘಟನೆಯನ್ನು ಶಕ್ತಿಯುತವಾಗಿ ಬೆಳೆಯಬೇಕು ಎಂದು ತಿಳಿಸಿದ್ದರು. ಅದರಂತೆ ಮೈಸೂರು ಜಿಲ್ಲಾ ಸರಕಾರಿ ನೌಕರರ ಖಜಾನೆ ಶಾಖೆಯನ್ನು ಇಂದು ವಾರ್ತಾಭವನದಲ್ಲಿ ನಾವು ಉದ್ಘಾಟಿಸಿದ್ದೇವೆ ನಿಮ್ಮೆಲ್ಲರ ಸಹಕಾರ ಹೀಗೆ ನಮ್ಮ ಮೇಲೆ ಇರಲಿ ರಾಜ್ಯಾಧ್ಯಕ್ಷ ಷಡಕ್ಷರಿ ರವರು ನೌಕರರ ಕ್ಷೇಮಾಭಿವದ್ಧಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಎಂಬ ಶೀರ್ಷಿಕೆಯಡಿ ಕೆಲಸ ಮಾಡಲು ಇಚ್ಛಿಸಿದ್ದು, ಇದನ್ನ ಚಾಲನೆ ನೀಡುವ ಉದ್ದೇಶದಿಂದ ಸಂಘಟನೆಯನ್ನು ಇನ್ನೂ ಬಲಶಾಲಿಯಾಗಿ ಮಾಡಬೇಕೆಂದು ಹೇಳಿದ್ದರು ಅದೇ ರೀತಿ ನಾವೂ ಕೂಡ ಸಂಘಟನೆಯನ್ನು ಇನ್ನೂ ಎತ್ತರಕ್ಕೆ ಬೆಳೆಸುತ್ತೇವೆ ಹಾಗೂ ಅಧ್ಯಕ್ಷರಿಗೆ ನಮ್ಮ ಬೆಂಬಲವನ್ನು ಯಾವಾಗಲೂ ನೀಡುತ್ತೇವೆ ಎಂದು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾನೆಯ ಸಹಾಯಕ ನಿರ್ದೇಶಕ ಗಿರಿಜಾಂಬ, ಜಿಲ್ಲಾ ಖಜಾನೆ ನೌಕರರ ಸಂಘದ ಅಧ್ಯಕ್ಷ ಹೇಮಂತ ಕುಮಾರ್, ಉಪಾಧ್ಯಕ್ಷ ಗಣೇಶ್ ಕೆ.ಎನ್., ಕಾರ್ಯದರ್ಶಿ ಗಣೇಶ್ ಹೆಚ್.ಎಂ., ಆಯವ್ಯಯ ಅಧಿಕಾರಿ ವೆಂಕಟಶೇಷ್ ಕೆ.ಎಸ್. ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.