ಸಂಘಗಳ ಏಳಿಗೆಗೆ ವಿಶ್ವಾಸ, ನಂಬಿಕೆ ಅಗತ್ಯ

ಮುದಗಲ್,ಮಾ.೧೯- ಪಟ್ಟಣದ ಭಾರತ ಇವೆಂಟ್‌ನಲ್ಲಿ ಆಯೋಜಿಸಿದ್ದ ದವೆ೯ಸು ಅಲೆಮಾರಿ ಜನಾಂಗಗಳ ಸಂಘಗಳನ್ನು ಉದ್ಘಾಟನೆ ಮಾಡಿ, ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಲಿಂಗಸೂರು ಕ್ಷೇತ್ರದ ಪ್ರಬಲ ಆಕಾಂಕ್ಷಿಯಾದ ಆರ್. ರುದ್ರಯ್ಯ ಸಂಘ ಸ್ಥಾಪನೆಯ ಮೂಲ ಉದ್ದೇಶ ಈಡೇರಿಕೆಗೆ ಸದಸ್ಯರುಗಳಲ್ಲಿ ವಿಶ್ವಾಸ, ನಂಬಿಕೆ ಬಲಿಷ್ಠವಾಗಬೇಕು ಮೊದಲು ಸಂಘ ಏಳಿಗೆಗೆ ವಿಶ್ವಾಸ, ನಂಬಿಕೆ ಅಗತ್ಯ ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನನ್ನನ್ನು ಬೆಂಬಲಿಸಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದು.
ಈ ಸಂದರ್ಭದಲ್ಲಿ ಕಾಯ೯ಕ್ರಮ ಸಾನಿಧ್ಯವನ್ನು ಮೌಲಾನಾಜಮೀರ, ಅಹದಖಾಜಿ, ಸೈಯದ್ ಯಾಸೀನ್ ಖಾದ್ರಿ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಆರ್.ಎಸ್. ನಾಡಗೌಡ, ಆರ್.ವಿ. ಗುಮಾಸ್ತೆ,ಪತ್ರಕರ್ತರುನಿವೃತ್ತ ಶಿಕ್ಷಕ ಸಂಗಣ್ಣ ಬಯ್ಯಾಪೂರ, ಎಸ್.ಆರ್.ರಸೂಲ, ನಾಗರಾಜದ ಫೇದಾರ ವೇದಿಕೆ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರಾಬಿಯಾ ಬೇಗಂ, ಸಂಘದ ಗೌರವಾಧ್ಯಕ್ಷ ದಾದಾಪೀರ, ಅಧ್ಯಕ್ಷರಾದ ರಹಿಮಷಾ ಮಕಾನ್‌ದಾರ, ಕಾರ್ಯದರ್ಶಿ ಮೋಹಿ ಯುದ್ದೀನ್ ಭಂಡಾರಿ, ಸಹ ಕಾರ್ಯದರ್ಶಿ ಮೀರ ಹುಸೇನ್ ನಾಗನಗೌಡ ತುರಡಗಿ, ಜಂಬನಗೌಡ ಕಾಚಾಪೂರ, ಹೊನ್ನಪ್ಪ ಮೇಟಿ , ಶರಣಪ್ಪ, ಲಕ್ಷಣ ರಾಠೋಡ, ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.